ಅಲ್ಕಾ ಯಾಗ್ನಿಕ್ ಗಾಯನಕ್ಕೆ ವಿದಾಯ?

ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್ ಅವರು ಅಪರೂಪದ ಶ್ರವಣ ದೋಷದಿಂದ ಬಳಲುತ್ತಿದ್ದು, ಅವರು ಯಾವುದೇ ಹೊಸ ಹಾಡುಗಳನ್ನು ಒಪ್ಪಿಕೊಳ್ಳುತ್ತಿಲ್ಲ.

ಸಂದರ್ಶನವೊಂದರಲ್ಲಿ ಅಲ್ಕಾ ಯಾಗ್ನಿಕ್  ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. ‘ನಾನು ಶ್ರವಣ ದೋಷ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಸಂಗೀತ ನಿರ್ದೇಶಕರು ನನ್ನನ್ನು ಸಂಪರ್ಕಿಸುತ್ತಿದ್ದಾರೆ. ಆದರೆ ಹಾಡಲು ಆರೋಗ್ಯ ಸಹಕರಿಸುತ್ತಿಲ್ಲ. ಪ್ರಸ್ತುತ ಯಾವುದೇ ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

1980ರ ದಶಕದಿಂದಲೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅಲ್ಕಾ ಯಾಗ್ನಿಕ್ ಅವರು ಹಾಡುವುದು ನಿಲ್ಲಿಸಿ 2 ವರ್ಷ ಆಗಿದೆ. ಅವರ ಧ್ವನಿಯಲ್ಲಿ ಕೊನೆಯದಾಗಿ ಮೂಡಿಬಂದ ಹಾಡು ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದ ‘ನರಂ ಕಾಲ್ಜಾ’.  ಅವರಿಗೆ ಈಗ 60 ವರ್ಷ ವಯಸ್ಸು.

ಅಲ್ಕಾ ಯಾಗ್ನಿಕ್ ಅವರು ಹಿಂದಿ ಮಾತ್ರವಲ್ಲದೇ ತೆಲುಗು, ತಮಿಳು, ಬೆಂಗಾಲಿ, ಪಂಜಾಬಿ ಮುಂತಾದ ಭಾಷೆಯ ಅನೇಕ ಸೂಪರ್ ಹಿಟ್ ಗೀತೆಗಳಿಗೆ ಧ್ವನಿ ಆಗಿದ್ದಾರೆ. ಈಗಲೂ ಅವರಿಗೆ ಬೇಡಿಕೆ ಇದೆ. ಇತ್ತೀಚೆಗಷ್ಟೇ ಭಾರತ ಸರ್ಕಾರ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಕೆಲವು ದಿನಗಳ ಹಿಂದೆ ಖ್ಯಾತ ಗಾಯಕ ಅರಿಜಿತ್ ಸಿಂಗ್   ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳಿದ್ದರು. ಈಗ ಅಲ್ಕಾ ಯಾಗ್ನಿಕ್  ಅವರಿಗೆ ಅನಾರೋಗ್ಯದ ಕಾರಣ ಹಾಡಲು ಸಾಧ್ಯವಾಗುತ್ತಿಲ್ಲ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!