ಪೈಲ್ವಾನ್ ಅವತಾರದಲ್ಲಿ ರಾಮ್ ಚರಣ್

ರಾಮ್ ಚರಣ್ ‘ಪೆದ್ದಿ’ ಟೀಸರ್ ನಲ್ಲಿ ಕುಸ್ತಿ ಅಖಾಡದಲ್ಲಿ ದೈತ್ಯ ಯೋಧನಂತೆ ಎಂಟ್ರಿ ಕೊಟ್ಟಿದ್ದಾರೆ.

ಬುಚ್ಚಿ ಬಾಬು ಸಾನಾ ನಿರ್ದೇಶನದ  ಬಹುನಿರೀಕ್ಷಿತ ಗ್ರಾಮೀಣ ಕ್ರೀಡಾ ಡ್ರಾಮಾ ‘ಪೆದ್ದಿ’ ಚಿತ್ರದ ಹೊಸ ಟೀಸರ್  ಬಿಡುಗಡೆಯಾದ ಕ್ಷಣಾರ್ಧದಲ್ಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಾಮ್ ಚರಣ್  ಸಂಪೂರ್ಣ ವಿಭಿನ್ನ ಮಾಸ್ ಅವತಾರದಲ್ಲಿ ದರ್ಶನ ನೀಡಿದ್ದಾರೆ.  ತಮ್ಮ ಭಾರೀ ಮೈಕಟ್ಟು, ಟೋನ್ಡ್ ಬಾಡಿ ಮತ್ತು ರಫ್, ಶಾರ್ಪ್ ಲುಕ್‌  ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದೆ.

ಚಿತ್ರದ ಕಥಾಹಂದರ  ಉತ್ತರಾಂಧ್ರದ ಗ್ರಾಮೀಣ ಹಿನ್ನೆಲೆ, ಸ್ಥಳೀಯ ಕ್ರೀಡೆಗಳು,  ಕುಸ್ತಿ ಇವುಗಳ ಸುತ್ತ ಕಥೆ ಸಾಗಲಿದೆ ಎಂದು ಸ್ಪಷ್ಟವಾಗಿದೆ. ಚರಣ್ ಅವರನ್ನು ಇಷ್ಟು ರಾ ಮತ್ತು ಪವರ್‌ಫುಲ್ ಶೈಲಿಯಲ್ಲಿ ಇದುವರೆಗೆ ಯಾರೂ ತೋರಿಸಿರಲಿಲ್ಲ. ಲಿವುಡ್ ನಟಿ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಭಾರಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ‘ಪೆದ್ದಿ’ ಸಿನಿಮಾ  ಎಲ್ಲಾ ವಿಭಾಗಗಳಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸುವ ನಿರೀಕ್ಷೆ ಮೂಡಿಸಿದೆ.  ‘ಪೆದ್ದಿ’ ಏಪ್ರಿಲ್ 30ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.  ಈಗಾಗಲೇ ಟೀಸರ್ ಮೂಲಕ  ಹೈಪ್ ಸೃಷ್ಟಿಸಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!