ಈ ವಾರ ತೆರೆಗೆ ‘ಸಿಂಗ’

ಯು ಕೆ ಎಂ ಸ್ಟುಡಿಯೋಸ್ ಲಾಂಛನದಲ್ಲಿ ಉದಯ್ ಕೆ ಮೆಹ್ತಾ ಅವರು ನಿರ್ಮಿಸಿರುವ ‘ಸಿಂಗ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಹಿಂದೆ ‘ರಾಮ್‍ಲೀಲಾ ‘ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್ ಕಿರಣ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ, ಧರ್ಮ ವಿಶ್ ಸಂಗೀತ ನಿರ್ದೇಶನ, ಡಾ||ಕೆ.ರವಿವರ್ಮ, ಪಳನಿರಾಜ್ ಸಾಹಸ ನಿರ್ದೇಶನ, ಗಣೇಶ್ ಸಂಕಲನ ಹಾಗೂ ಶಿವಾರ್ಜುನ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ಡಾ||ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ಚೇತನ್ ‘ಸಿಂಗ` ಚಿತ್ರದ ಹಾಡುಗಳನ್ನು ಬರೆದಿದ್ದಾರೆ.

ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಅದಿತಿ ಪ್ರಭುದೇವ. ರವಿಶಂಕರ್, ತಾರಾ, ಶಿವರಾಜ್ ಕೆ.ಆರ್ ಪೇಟೆ, ಅರುಣಾ ಬಾಲರಾಜ್, ರಂಜಿತಾ, ಚಂದ್ರಪ್ರಭ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

This Article Has 2 Comments
  1. Pingback: Digital Transformation

  2. Pingback: Regression testing

Leave a Reply

Your email address will not be published. Required fields are marked *

Translate »
error: Content is protected !!