ರಾಜ್ ಶೆಟ್ಟಿ, ರುಕ್ಮಿಣಿ ವಸಂತ್ ರಿಂದ ದೂರವಾದ ರಿಷಬ್?

ಹೊಂಬಾಳೆ ಫಿಲಮ್ಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅನ್ಫಾಲೋ ಮಾಡಿದ  ರಿಷಬ್ ಶೆಟ್ಟಿ ತಮ್ಮ ಆಪ್ತ ಸ್ನೇಹಿತ ರಾಜ್ ಬಿ ಶೆಟ್ಟಿ ಹಾಗೂ ‘ಕಾಂತಾರ’ ಚಿತ್ರದ ನಾಯಕಿ ರುಕ್ಮಿಣಿ ವಸಂತ್ ಅವರನ್ನು  ಅನ್ಫಾಲೋ ಮಾಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ  ರಿಷಬ್ ಶೆಟ್ಟಿ ಅವರು ರಕ್ಷಿತ್ ಶೆಟ್ಟಿಪ್ರಮೋದ್ ಶೆಟ್ಟಿಜೆಪಿ ತುಮ್ಮಿನಾಡ್ ಸೇರಿದಂತೆ ಹಲವರನ್ನು ಫಾಲೋ ಮಾಡುತ್ತಿದ್ದಾರೆ. ಅವರ ಫಾಲೋ ಪಟ್ಟಿಯಲ್ಲಿ ರಾಜ್ ಬಿ ಶೆಟ್ಟಿ, ರುಕ್ಮಿಣಿ ವಸಂತ್ ಹೆಸರು ಕಾಣಿಸದಿರುವುದು ಈ ಊಹೆಗಳಿಗೆ ಬಲ ನೀಡಿದೆ. ರಿಷಬ್ ಅವರು ಕೆಲ ವಾರಗಳ ಹಿಂದೆ ಹೊಂಬಾಳೆ ಫಿಲಮ್ಸ್ ನ್ನು ಸಾಮಾಜಿಕ ಜಾಲತಾಣದಲ್ಲಿ ಅನ್ಫಾಲೋ ಮಾಡಿದ್ದರು.

ಪ್ರಗತಿ ಶೆಟ್ಟಿ ಕೂಡ ರಾಜ್ ಬಿ ಶೆಟ್ಟಿಯನ್ನು ಅನ್ಫಾಲೋ ಮಾಡಿದ್ದಾರೆ. ಹೊಂಬಾಳೆ ಫಿಲಮ್ಸ್‌ನ್ನೂ ಫಾಲೋ ಮಾಡುತ್ತಿಲ್ಲ.ಆದರೆ ಅವರು ಇನ್ನೂ ರುಕ್ಮಿಣಿ ವಸಂತ್ ಅವರನ್ನು ಫಾಲೋ ಮಾಡುತ್ತಿದ್ದಾರೆ.

ರಾಜ್ ಬಿ ಶೆಟ್ಟಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಯಾವುದೇ ಅಪ್ಡೇಟ್ ಹಂಚಿಕೊಳ್ಳದೇ ಆ ಚಿತ್ರಕ್ಕೆ ತಮಗೆ ಸಂಬಂಧವಿಲ್ಲ ಎಂದು ಸಂದರ್ಶನದಲ್ಲಿ ಹೇಳಿಕೆ ನೀಡಿದ್ದರು. ನಂತರದ ಇಬ್ಬರ ನಡುವಿನ ಮನಸ್ಥಾಪದ ಕುರಿತು ಚರ್ಚೆಗಳು ಆರಂಭವಾಗಿದ್ದವು. ಇದೀಗ ಸೋಶಿಯಲ್ ಮೀಡಿಯಾದ ಈ ಬೆಳವಣಿಗೆ  ಆ ಮನಸ್ತಾಪಕ್ಕೆ ಮತ್ತಷ್ಟು ಬಲ ನೀಡಿದೆ.

‘ಕಾಂತಾರ: ಚಾಪ್ಟರ್ 1’ ಬಳಿಕ ರಿಷಬ್ ಶೆಟ್ಟಿ ಅವರು ತೆಲುಗಿನ ‘ಜೈ ಹನುಮಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರು ಹೊಸ ಸಿನಿಮಾ ತಯಾರಿಯಲ್ಲಿ ತೊಡಗಿರುವ ಸುಳಿವನ್ನೂ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!