ನಟಿ ರಶ್ಮಿಕಾ ಮಂದಣ್ಣ ಮದುವೆಯ ನಂತರ ಕೆಲಸಕ್ಕೆ ಮರಳಿದ್ದು, ‘ಮೈಸಾ’ ಚಿತ್ರದ ಚಿತ್ರೀಕರಣ ಆರಂಭಿಸಿದ್ದಾರೆ.
ಮಾರ್ಚ್ 17ರಂದು ರಶ್ಮಿಕಾ ಮಂದಣ್ಣ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರು ಹೊಸ ಅಪ್‌ಡೇಟ್ ಹಂಚಿಕೊಂಡಿದ್ದು, ನಿರ್ದೇಶಕ ರವೀಂದ್ರ ಪುಲ್ಲೆ ಅವರ ನಿರ್ದೇಶನದ ‘ಮೈಸಾ’ ಚಿತ್ರದ ಶೂಟಿಂಗ್‌ಗೆ ಹಾಜರಾಗಿರುವುದನ್ನು ದೃಢಪಡಿಸಿದ್ದಾರೆ. ಮರುಭೂಮಿಯಂತಹ ಪ್ರದೇಶದಲ್ಲಿ ನಡೆಯುತ್ತಿರುವ ಚಿತ್ರೀಕರಣದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ನಟ ವಿಜಯ್ ದೇವರಕೊಂಡ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ರಶ್ಮಿಕಾ ಅವರ 2026ರಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರಗಳಲ್ಲಿ ‘ಮೈಸಾ’ ಒಂದು. ಚಿತ್ರದಲ್ಲಿ ರಶ್ಮಿಕಾ ಅವರು ಆಕ್ರೋಶಭರಿತ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ವಿಜಯ್ ದೇವರಕೊಂಡ ಜೊತೆ ‘ರಣಬಾಲಿ’ ಸಿನಿಮಾದಲ್ಲಿ ಮತ್ತೆ ಜೊತೆಯಾಗಲಿದ್ದಾರೆ.
ಫೆಬ್ರವರಿ 26ರಂದು ಖಾಸಗಿ ಹೋಟೆಲ್‌ನಲ್ಲಿ ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಮದುವೆಯಾಗಿದ್ದರು. ಈ ಜೋಡಿ ಮಾರ್ಚ್ 4ರಂದು ಚಿತ್ರರಂಗದ ಗಣ್ಯರಿಗಾಗಿ ಅದ್ದೂರಿ ರಿಸೆಪ್ಷನ್ ಹಮ್ಮಿಕೊಂಡಿತ್ತು. ಹನಿಮೂನ್‌ಗೆ ತೆರಳಿ ಇತ್ತೀಚೆಗೆ ಮರಳಿದ ರಶ್ಮಿಕಾ ಮಂದಣ್ಣ ಅವರು ತಮ್ಮ ವೃತ್ತಿಜೀವನದತ್ತ ಗಮನ ಹರಿಸಿ ಕೆಲಸದಲ್ಲಿ ತೊಡಗಿದ್ದಾರೆ.
—-





Be the first to comment