ಧುರಂಧರ್ 2 ಬಿಡುಗಡೆ ಮುನ್ನ100 ಕೋಟಿ ಕಲೆಕ್ಷನ್!

ಬಹುನಿರೀಕ್ಷಿತ ‘ಧುರಂಧರ್: ದಿ ರಿವೆಂಜ್’ ಬಿಡುಗಡೆಗೂ ಮುನ್ನ ಅಡ್ವಾನ್ಸ್ ಬುಕ್ಕಿಂಗ್ ನಿಂದ  100 ಕೋಟಿ ರೂ. ಗಳಿಕೆ ಮಾಡಿದೆ.

ದೇಶೀಯ ಮಾರುಕಟ್ಟೆಯಿಂದ 44 ಕೋಟಿ ರೂ., ವಿದೇಶಗಳಿಂದ 57 ಕೋಟಿ ರೂಪಾಯಿ ಗಳಿಕೆ ಹರಿದು ಬಂದಿದೆ. ಈ ಚಿತ್ರ  ವಿದೇಶಗಳಲ್ಲಿ ದಾಖಲೆಯನ್ನು ಬರೆಯುತ್ತಿದೆ. ಕೆನಡಾ, ಆಸ್ಟ್ರೇಲಿಯಾದಲ್ಲಿ ಬಾಹುಬಲಿ: ದಿ ಕನ್‌ಕ್ಲೂಷನ್‌ನ ದೀರ್ಘಕಾಲದ ದಾಖಲೆಯನ್ನು’ಧುರಂಧರ್: ದಿ ರಿವೆಂಜ್’  ಚಿತ್ರ ಮಾರಾಟವಾದ ಟಿಕೆಟ್‌ಗಳ ವಿಷಯದಲ್ಲಿ ಮೀರಿಸಿದೆ.

ಸಾಮಾನ್ಯವಾಗಿ, ಪ್ರದರ್ಶಕರು ಬೇಡಿಕೆಯ ಆಧಾರದ ಮೇಲೆ ಸೋಮವಾರ ಮತ್ತು ಮಂಗಳವಾರ ಪ್ರದರ್ಶನಗಳನ್ನು ಸೇರಿಸುತ್ತಾರೆ. ವಿತರಕರು ಎಷ್ಟು ಪ್ರದರ್ಶನಗಳನ್ನು ಪಡೆದುಕೊಳ್ಳುತ್ತಾರೆ ಎಂಬುದರ ಆಧಾರದ ಮೇಲೆ  ಪೂರ್ವ-ಮಾರಾಟ ಮತ್ತಷ್ಟು ಬೆಳೆಯುತ್ತದೆ.

ಧುರಂಧರ್ ಚಿತ್ರದ ಮೊದಲ ಭಾಗವು ಸುಮಾರು 1300 ಕೋಟಿ ರೂಪಾಯಿ ಗಳಿಸಿತ್ತು. ಮಾರ್ಚ್ 19ರಂದು  ಧುರಂಧರ್: ದಿ ರಿವೆಂಜ್ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ರಣವೀರ್ ಸಿಂಗ್, ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್, ಸಾರಾ ಅರ್ಜುನ್ , ರಾಕೇಶ್ ಬೇಡಿ ಅಭಿನಯಿಸಿದ್ದಾರೆ. ಮೊದಲ ಭಾಗದಲ್ಲಿ  ಡಕಾಯಿತ ಪಾತ್ರ ನಿರ್ವಹಿಸಿದ ಅಕ್ಷಯ್ ಖನ್ನಾ ಅವರ ಅತಿಥಿ ಪಾತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!