ಶೀಘ್ರವೇ ಅನುಷ್ಕಾ ಶೆಟ್ಟಿ ವಿವಾಹ?

ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರು ಶೀಘ್ರದಲ್ಲಿ ಉದ್ಯಮಿಯೊಬ್ಬರ ಜೊತೆ ವಿವಾಹವಾಗಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

ಈ ಹಿಂದೆ ತೆಲುಗಿನ ಪ್ರಖ್ಯಾತ ನಟ ಪ್ರಭಾಸ್ ಅವರ ಜೊತೆ ಅನುಷ್ಕಾ ಶೆಟ್ಟಿ ಅವರ ಹೆಸರು ಹರಿದಾಡುತ್ತಿತ್ತು. ಆದರೆ ಇಬ್ಬರು ಮದುವೆಯ ವಿಚಾರವನ್ನು ನಿರಾಕರಿಸಿ ತಾವು ಕೇವಲ ಸ್ನೇಹಿತರು ಎಂದು ಸ್ಪಷ್ಟವಾಗಿ ಹೇಳಿದ್ದರು. ಈಗ ಅನುಷ್ಕಾ ಶೆಟ್ಟಿ ಅವರ ಹೆಸರು ಉದ್ಯಮಿಯೊಬ್ಬರ ಜೊತೆಗೆ ವಿವಾಹವಾಗುವ ಬಗ್ಗೆ ತಳುಕು ಹಾಕಿಕೊಂಡಿದೆ.

ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಯಾವುದೇ ವಿಚಾರಗಳನ್ನು ಹಂಚಿಕೊಳ್ಳಲು ಅನುಷ್ಕಾ ಶೆಟ್ಟಿ ಇಷ್ಟಪಡುವುದಿಲ್ಲ. ಈಗಲೂ ಮದುವೆ ಆಗುವ ವಿಚಾರದ ಬಗ್ಗೆ ಅವರು ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಆದರೆ ಮದುವೆ ಆಗುವ ನಿಟ್ಟಿನಲ್ಲಿ ಗೌಪ್ಯವಾಗಿ ಉದ್ಯಮಿಯ ಜೊತೆಗೆ ತಯಾರಿಗಳು ನಡೆದಿವೆ ಎಂದು ಹೇಳಲಾಗುತ್ತಿದೆ.

ಅನುಷ್ಕಾ ಶೆಟ್ಟಿ ಅವರಿಗೆ ಬಾಹುಬಲಿ ಚಿತ್ರ ದೊಡ್ಡ ಹೆಸರನ್ನು ತಂದುಕೊಟ್ಟಿತು. ಆನಂತರ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗಲಿಲ್ಲ. ಈಗ ಅವರು ವಿವಾಹವಾಗಲು ಮುಂದಾಗುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ.

ಅನುಷ್ಕಾ ಅವರ ವಿವಾಹದ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಗಳು ಇದುವರೆಗೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳುವ ನಿರೀಕ್ಷೆಯನ್ನು ಹೊಂದಲಾಗಿದೆ.

ಈ ವರ್ಷವೇ ಉದ್ಯಮಿಯ ಜೊತೆ ಅನುಷ್ಕಾ ಶೆಟ್ಟಿ ಅವರ ವಿವಾಹ ನಡೆಯಲಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಅಭಿಮಾನಿಗಳ ದೃಷ್ಟಿ ಅನುಷ್ಕಾ ಮೇಲೆ ನೆಟ್ಟಿದೆ.
_

Be the first to comment

Leave a Reply

Your email address will not be published. Required fields are marked *

Translate »
error: Content is protected !!