ನಟಿ ರಶ್ಮಿಕಾ ಮಂದಣ್ಣರ ತಾಯಿ ಮಾತನಾಡಿದ್ದು ಎನ್ನಲಾದ ಆಡಿಯೋವನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ರಶ್ಮಿಕಾ ಎಚ್ಚರಿಕೆ ನೀಡಿದ್ದಾರೆ.
ಕಳೆದ ಎಂಟು ವರ್ಷಗಳಿಂದ ತನ್ನ ವಿರುದ್ಧ ತಪ್ಪು ಮಾಹಿತಿಯನ್ನು ಹರಡಲು, ಕಿರುಕುಳ ನೀಡಲು, ಉದ್ದೇಶಪೂರ್ವಕವಾಗಿ ಮೇಲೆ ದಾಳಿ ಮಾಡಲು ಅಭಿಯಾನ ನಡೆಸಲಾಗುತ್ತಿದೆ. ತಮ್ಮ ಹೇಳಿಕೆಗಳನ್ನು ಪದೇ ಪದೇ ಹೊರ ಬಿಡಲಾಗಿದೆ. ತಪ್ಪು ಅಭಿಪ್ರಾಯಗಳನ್ನು ಸೃಷ್ಟಿಸಲು ದ್ವೇಷದ ಕಥೆಗಳನ್ನು ರಚಿಸಲಾಗಿದೆ ಎಂದು ರಶ್ಮಿಕಾ ಆರೋಪಿಸಿದ್ದಾರೆ.
ರಶ್ಮಿಕಾ ಮಂದಣ್ಣ ಎಕ್ಸ್ನ ಪೋಸ್ಟ್ನಲ್ಲಿ 8 ವರ್ಷಗಳ ಹಳೆಯ ಖಾಸಗಿ ಸಂಭಾಷಣೆಯನ್ನು ಮಾತನಾಡಿದವರ ಒಪ್ಪಿಗೆಯಿಲ್ಲದೆ ರೆಕಾರ್ಡ್ ಮಾಡಿ ಹಂಚಿಕೊಳ್ಳಲಾಗಿದೆ. ಕಳೆದ ಎಂಟು ವರ್ಷಗಳಿಂದ ಕೆಲವರು ಆನ್ಲೈನ್ನಲ್ಲಿ ಹರಡಿದ ತಪ್ಪು ಮಾಹಿತಿ ಮತ್ತು ಕಿರುಕುಳವನ್ನು ತಾನು ಸಹಿಸಿಕೊಂಡಿದ್ದೇನೆ. ಈ ಆಡಿಯೋವನ್ನು ಹಂಚಿಕೊಳ್ಳುವವರನ್ನು ತಕ್ಷಣವೇ ತೆಗೆದುಹಾಕಬೇಕು. 24 ಗಂಟೆಯ ಒಳಗೆ ಆಡಿಯೋ ತೆಗೆದು ಹಾಕಲು ವಿಫಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ರಶ್ಮಿಕಾ ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ. ವರ್ಷಗಳಿಂದ ದಯೆ, ತಿಳುವಳಿಕೆ ಮತ್ತು ಪ್ರೀತಿಯಿಂದ ನನ್ನನ್ನು ಬೆಂಬಲಿಸಿದ ಎಲ್ಲರಿಗೂ, ನಾನು ತುಂಬಾ ಕೃತಜ್ಞನಾಗಿದ್ದೇನೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ. ಇನ್ನು ಅಪರಿಚಿತರು ನನ್ನ ಜೀವನ ಹೇಗಿರಬೇಕು ಅಂತ ನಿರ್ಧಾರ ಮಾಡಕ್ಕಾಗುತ್ತಾ? ನಮ್ ಜೀವನ ನಮ್ದಲ್ವಾ? ನಮ್ ನಿರ್ಧಾರ ನಾವೇ ತೊಗೋಬೇಕು ಮತ್ತೆ ತೊಗೋತೀವಿ ಕೂಡ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಷ್ಟ ಬಂದ ಕೂಡಲೇ ರಶ್ಮಿಕಾಗೆ ಕನ್ನಡ ನೆನಪಾಯ್ತಾ? ಎಂದು ತರಾಟೆ ತೆಗೆದುಕೊಂಡಿದ್ದಾರೆ.
_





Be the first to comment