ಗೀತಾ ಬಾಡಿ ಶೇಮಿಂಗ್ ಆರೋಪಕ್ಕೆ ತಿರುಗೇಟು

‘ಲವ್ ಮಾಕ್ಟೇಲ್’ ಸಿನಿಮಾದ ಡೈಲಾಗ್‌ಗೆ ಸಂಬಂಧಿಸಿದಂತೆ ನಟಿ ಗೀತಾ ಭಾರತಿ ಭಟ್ ಮಾಡಿದ್ದ ಬಾಡಿಶೇಮಿಂಗ್ ಆರೋಪಕ್ಕೆ  ಚಿತ್ರದ ನಿರ್ಮಾಪಕಿ ಮಿಲನಾ ನಾಗರಾಜ್  ತಿರುಗೇಟು ನೀಡಿದ್ದಾರೆ.

“ಅವರಿಗೆ ಪಾತ್ರದ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು. ಕಲಾವಿದರಿಗೆ ತಿಳಿಸದೇ ನಾವು ಯಾವುದೇ ದೃಶ್ಯ ಮಾಡೋದಿಲ್ಲ. ಆ ರೀತಿಯ ಪಾತ್ರವನ್ನು ಒಪ್ಪಿಕೊಳ್ಳಬಾರದಿತ್ತು. ಯಾವುದನ್ನೂ ಮುಚ್ಚಿಟ್ಟು ಮಾಡಿಲ್ಲ. ಆಡಿಷನ್ ಮಾಡಿ ಕಾಸ್ಟ್ ಮಾಡಲಾಗಿದೆ,” ಎಂದು ಮಿಲನಾ ನಾಗರಾಜ್ ತಿರುಗೇಟು ನೀಡಿದ್ದಾರೆ.

“ನಮ್ಮ ಸಿನಿಮಾದ ಒಂದು ದೃಶ್ಯಕ್ಕೆ ಮಾತ್ರ ತಕರಾರು ತೆಗೆದುಕೊಳ್ಳುವುದು ಸರಿಯಲ್ಲ. ಮೇಕಿಂಗ್ ವಿಡಿಯೋ ಯೂಟ್ಯೂಬ್‌ನಲ್ಲೇ ಇದೆ. ಯಾರನ್ನೂ ನೋಯಿಸುವ ಉದ್ದೇಶ ಇರಲಿಲ್ಲ,” ಎಂದು ನಿರ್ದೇಶಕ ಕೃಷ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ.

“ಅದು ಬಾಡಿಶೇಮಿಂಗ್ ಮಾಡುವ ಉದ್ದೇಶದಿಂದ ಬರೆಯಲಾದ ಡೈಲಾಗ್ ಅಲ್ಲ. ರೈಮಿಂಗ್ ಆಗಿ ಬರೆದಿದ್ದು ಅಷ್ಟೇ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗೀತಾ ಭಾರತಿ ಭಟ್ ಅವರು ಹಿಂದೆ ಧಾರಾವಾಹಿಯಲ್ಲಿ  ಇದೇ ರೀತಿಯ ಕಥೆ ಹೊಂದಿದ ಪಾತ್ರದಲ್ಲಿ  ನಟಿಸಿದ್ದರು ಎಂದು ಕೃಷ್ಣ ಹೇಳಿದ್ದಾರೆ.

“ಹೂ ತರ ಇದ್ಲು, ಹೂಕೋಸ್ ತರ ಆಗಿದ್ದಾಳೆ” ಎಂಬ ಡೈಲಾಗ್ ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ಬಳಕೆಯಾಗಿದ್ದು, ಈ ದೃಶ್ಯವನ್ನು ಚಿತ್ರಿಸುವಾಗ ಅದರ ಅರ್ಥ ತಿಳಿದಿರಲಿಲ್ಲ ಎಂದು ಗೀತಾ ಭಾರತಿ ಭಟ್ ಹೇಳಿದ್ದರು. ಥಿಯೇಟರ್‌ನಲ್ಲಿ ಸಿನಿಮಾ ನೋಡಿದಾಗ ತಮಗೆ ಶಾಕ್ ಆಗಿತ್ತು ಎಂದು ಆರೋಪಿಸಿದ್ದರು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!