ಬಿಗ್ ಬಾಸ್ ಮಾಜಿ ಸ್ಪರ್ಧಿ ಡಾಗ್ ಸತೀಶ್ ಗೆ ಕೊಲೆ ಬೆದರಿಕೆ ಹಾಕಿದ ಆರೋಪದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಡಾಗ್ ಸತೀಶ್ ನೀಡಿದ ದೂರಿನ ಮೇಲೆ ರಜತ್ ವಿರುದ್ಧ FIR ದಾಖಲಾಗಿದೆ. ಪೊಲೀಸರು ಧನರಾಜ್ ಮೇಲೆ ಕೇಸ್ ದಾಖಲು ಮಾಡಿದ್ದಾರೆ.
ಡಿ.12 ರಂದು ರಜತ್ ಕರೆ ಮಾಡಿ ನಾನು ಮತ್ತು ನನ್ನ ಸ್ನೇಹಿತ ಧನರಾಜ್ ಇಬ್ಬರು ಸೇರಿ ಒಂದು ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿದ್ದೇವೆ. ನಿಮ್ಮ ಸಂದರ್ಶನವನ್ನು ಹಾಕುತ್ತೇವೆ ಎಂದು ಹೇಳಿ ನನ್ನನ್ನು ಮಾತನಾಡಿಸಿದ್ದರು. ಆದರೆ ಅಪ್ಲೋಡ್ ಮಾಡುವಾಗ ನನ್ನ ಸಂಭಾಷಣೆಯನ್ನು ತಿರುಚಿ ನನಗೆ ಅವಮಾನ ಮಾಡಿದ್ದಾರೆ.
ಎರಡು ಕ್ಯಾಮೆರಾ ಮತ್ತು ಎರಡು ಮೊಬೈಲ್ ನಲ್ಲಿ ಸಂದರ್ಶನವನ್ನು ಶೂಟ್ ಮಾಡಿದ್ದರು. ಫೆಬ್ರವರಿ 27 ರಂದು ರಾತ್ರಿ 10:30ಕ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮೆಸೇಜ್ ಹಾಕಿದ್ದಕ್ಕೆ ರಜತ್ ಅವರು ನನ್ನ ಮೇಲೆ ಕೊಲೆ ಬೆದರಿಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ರಜತ್ ಫೋನಿನಿಂದ ಮಧ್ಯರಾತ್ರಿ ಕೊಲೆ ಬೆದರಿಕೆ ಬರುತ್ತಿತ್ತು. ರಜತ್ ಮತ್ತು ಧನರಾಜ್ ಉದ್ದೇಶಪೂರ್ವಕವಾಗಿ ಮಾನಹಾನ ಮಾಡಿ ಬೈದಿದ್ದಾರೆ. ಇವರ ವಿರುದ್ಧ ಕ್ರಮಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರಿನ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಬೆದರಿಕೆ ಮತ್ತು ನಿಂದನೆ ಆರೋಪ ಸಂಬಂಧ ರಜತ್ ವಿರುದ್ಧ ಗಿರೀಶ್ ಕುಮಾರ್ ಎಂಬವರು ದೂರು ನೀಡಿದ್ದರು.
—-





Be the first to comment