ಭಾರೀ ಮೊತ್ತಕ್ಕೆ ‘ಟಾಕ್ಸಿಕ್ ‘ ಆಡಿಯೋ ಹಕ್ಕು

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಆಡಿಯೋ ಹಕ್ಕು ಭಾರೀ ಮೊತ್ತಕ್ಕೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ.

ಜೀ ಮ್ಯೂಸಿಕ್ ಕಂಪನಿಯು ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಚಿತ್ರ  ಆಡಿಯೋ ಹಕ್ಕುಗಳಿಂದ  ₹40 ಕೋಟಿಗೂ ಹೆಚ್ಚು ಗಳಿಸಿದೆ ಎಂದು ಹೇಳಲಾಗುತ್ತಿದೆ. ‘ಪುಷ್ಪಾ 2: ದಿ ರೂಲ್’ ಮತ್ತು ‘ಧುರಂಧರ್‌’ನಂತಹ ದೊಡ್ಡ ಚಿತ್ರಗಳಿಗಿಂತ ‘ಟಾಕ್ಸಿಕ್’ ಆಡಿಯೋ ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಟಾಕ್ಸಿಕ್‌ನ ಆಡಿಯೊ ಒಪ್ಪಂದ ಸಿನಿಮಾ ಬಗ್ಗೆ  ಕ್ರೇಜ್ ಸೃಷ್ಚಿಸಿದೆ.

ಈಗಾಗಲೇ ಬಿಡುಗಡೆಯಾಗಿರುವ ‘ತಬಾಹಿ’ ಹಾಡನ್ನು ಖ್ಯಾತ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಸಂಯೋಜಿಸಿ ಹಾಡಿದ್ದಾರೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಈ ಚಿತ್ರದ ಕನ್ನಡ ಆವೃತ್ತಿಯ ಹಾಡಿಗೆ  ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ.  ಹಿಂದಿಯಲ್ಲಿ ರಾಜ್ ಶೇಖರ್, ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತ್ರಿ, ತಮಿಳಿನಲ್ಲಿ ವಿಘ್ನೇಶ್ ಶಿವನ್ ಮತ್ತು ಮಲಯಾಳಂನಲ್ಲಿ ರಫೀಕ್ ಅಹಮ್ಮದ್  ಸಾಹಿತ್ಯ ಬರೆದಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಗೀತು ಮೋಹನ್ ದಾಸ್ ನಿರ್ದೇಶನದ ಸಿನಿಮಾ  ಡಿಸ್ಟ್ರಿಬ್ಯೂಟರ್ ಗಳ  ದೊಡ್ಡ ಜಾಲವನ್ನು ಸಹ ಹೊಂದಿದೆ. ಫಾರ್ಸ್ ಫಿಲ್ಮ್ ಸಾಗರೋತ್ತರ ಬಿಡುಗಡೆಯನ್ನು ನೋಡಿಕೊಳ್ಳುತ್ತಿದೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ತೆಲುಗು ರಾಜ್ಯಗಳಲ್ಲಿ ವಿತರಣೆಯನ್ನು ನಿರ್ವಹಿಸುತ್ತಿದೆ. ಎಎ ಫಿಲ್ಮ್ಸ್ ಉತ್ತರ ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಥಿಂಕ್ ಸ್ಟುಡಿಯೋಸ್, ಎಸ್ ಪಿಕ್ಚರ್ಸ್, ಟ್ರೈಡೆಂಟ್ ಆರ್ಟ್ಸ್,  ಫೈವ್ ಸ್ಟಾರ್ ಸೆಂಥಿಲ್ ಜಂಟಿಯಾಗಿ ತಮಿಳುನಾಡಿನ ಹಕ್ಕುಗಳನ್ನು ಪಡೆದುಕೊಂಡಿವೆ. ಇ4 ಎಂಟರ್‌ಟೈನ್‌ಮೆಂಟ್ ಕೇರಳದಲ್ಲಿ ವಿತರಣೆಯನ್ನು ನಿರ್ವಹಿಸುತ್ತಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!