ನಟಿಯ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ ಮೇಲ್‌!

ಕನ್ನಡದ ಖ್ಯಾತ ನಟಿ, ರಿಯಾಲಿಟಿ ಶೋ ಸ್ಪರ್ಧಿಯ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪ ಸಂಬಂಧ ದೂರು ದಾಖಲಾಗಿದೆ.

ಇತ್ತೀಚೆಗೆ ನಡೆದ ಮಹಿಳಾ ಸೆಲೆಬ್ರೆಟಿ ಕ್ರಿಕೆಟ್ ಟೂರ್ನಿಯಲ್ಲಿ ಈ ಘಟನೆ ನಡೆದಿದೆ.

ಪ್ರಕರಣ ಕೋರಮಂಗಲ ಒಳಾಂಗಣ ಸ್ಟೇಡಿಯಂನಲ್ಲಿ ಟೂರ್ನಿಯ ಎರಡನೇ ದಿನ ಸಂಭವಿಸಿದೆ. ನಟಿ ವಾಶ್ ರೂಮ್‌ಗೆ ಬಂದಾಗ ಅಪರಿಚಿತ ವ್ಯಕ್ತಿ ವೀಡಿಯೋ ಮತ್ತು ಪೋಟೋ ತೆಗೆದಿದ್ದ. ವಿಡಿಯೋ ಮತ್ತು ಫೋಟೋವನ್ನು ಬೆದರಿಕೆ ಮತ್ತು ಹಣ ಪಡೆಯಲು ಬಳಸಲು ಯತ್ನಿಸಿದ್ದಾಗಿ ಆರೋಪಿಸಲಾಗಿದೆ.

ಅಪರಿಚಿತ ವ್ಯಕ್ತಿ ‘Swan 3704722’ ಎಂಬ ಇನ್‌ಸ್ಟಾಗ್ರಾಮ್ ಅಕೌಂಟ್ ಮೂಲಕ ವಿಡಿಯೋವನ್ನು ನಟಿಯ ಆಪ್ತ ಸ್ನೇಹಿತೆಗೆ ಕಳುಹಿಸಿದ್ದ. ನಟಿಗೆ ಬೆದರಿಕೆ ಹಾಕಿ, ವೀಡಿಯೋ ವೈರಲ್ ಮಾಡಬಾರದೆಂದರೆ ಹಣ ಕೊಡಬೇಕು ಎಂದು ಹೇಳಿದ್ದ. ವೀಡಿಯೋ ಕಾಲ್ ಮೂಲಕ ನಟಿಗೆ ಬೆದರಿಕೆ ಹಾಕಿದ್ದ.

ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ. ಅಪರಿಚಿತ ವ್ಯಕ್ತಿಯ ಹುಡುಕಾಟ ಮುಂದುವರಿದಿದೆ. ಸಾರ್ವಜನಿಕರು ಮಾಹಿತಿ ಇದ್ದಲ್ಲಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

____

Be the first to comment

Leave a Reply

Your email address will not be published. Required fields are marked *

Translate »
error: Content is protected !!