‘ದೇವಕಿ’ ಸೆಲೆಬ್ರಿಟಿಯಿಂದ ಮೆಚ್ಚುಗೆ

ಬೆಂಗಳೂರಿನ ಪಿವಿಆರ್ ಓರಿಯನ್ ಮಾಲ್‌ನಲ್ಲಿ ಬುಧವಾರ ನಡೆದ ವರ್ಲ್ಡ್ ಪ್ರೀಮಿಯರ್ ರೆಡ್ ಕಾರ್ಪೆಟ್ ಶೋನಲ್ಲಿ ಹತ್ತು ಹಲವಾರು ಪ್ರಮುಖ ಕಲಾವಿದರು ಸಿನೆಮಾ ವೀಕ್ಷಿಸಿದರು.ಚಲನಚಿತ್ರವನ್ನು ವಿಭಿನ್ನ ಲೀಗ್‌ನಲ್ಲಿ ತೆಗೆದುಕೊಂಡ ತಾಯಿ ಮತ್ತು ಮುಗ್ಧ ಮಗಳ ನಿಜವಾದ ಪಯಣ ನಿಜಕ್ಕೂ ಒಂದು ಒಳ್ಳೆಯ ಬೆಳವಣಿಗೆ ಮತ್ತು ಸತ್ಯ ಆಧಾರಿತ ಕಥೆಯಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ ಪ್ರಿಯಾಂಕಾ ಉಪೇಂದ್ರ ಅವರ ನಟನೆ ನಿಜಕ್ಕೂ ಶ್ಲಾಘನೀಯ ಮತ್ತು ಅವರ ಮಗಳು ಐಶ್ವರ್ಯಾ ಅವರ ಚೊಚ್ಚಲ ಅಭಿನಯ ಕೂಡ ಚೆನ್ನಾಗಿದೆ ಎಂದು ಕ್ರೇಜಿ ಸ್ಟಾರ್ ರವಿಚಂದ್ರನ್ ಹೇಳಿದರು. ನಟ ಕಿಶೋರ್ ಅವರಿಂದ ಉತ್ತಮ ಪೋಷಕ ಪೋಲೀಸ್ ಪಾತ್ರ ಮತ್ತು ಲೋಹಿತ್ ಅವರ ನಿರ್ದೇಶನ ಉತ್ತಮವಾಗಿ ಮೂಡಿ ಬಂದಿದೆ.

ಈ ಸೆಲೆಬ್ರಿಟಿ ಪ್ರೀಮಿಯರ್ ಶೋ ಅನ್ನು ರೂಬಿನ್ ರಾಜ್ ಪ್ರೊಡಕ್ಷನ್ಸ್ ನವರು ಚೆನ್ನಾಗಿ ಆಯೋಜಿಸಿದ್ದಾರೆ ಮತ್ತು ಈ ಸಿನೆಮಾ ಕೇವಲ ಕನ್ನಡಿಗರು ಮಾತ್ರವಲ್ಲ ದೇಶದ ಅಥವಾ ಜಗತ್ತಿನ ಪ್ರತಿಯೊಬ್ಬ ತಾಯಿ ತಂದೆಯರು ಮಿಸ್ ಮಾಡದೆ ನೋಡಲೇಬೇಕಾದ ಚಲನಚಿತ್ರ ಎಂದು ರಿಯಲ್ ಸ್ಟಾರ್ ಉಪೇಂದ್ರ ಹೇಳಿದರು.ದೇವಕಿ ಸಿನೆಮಾ ಕೇವಲ ಒಂದು ಭಾಷೆಯ ಸಿನಿಮಾ ಆಗಿ ಕಾಣುವುದಿಲ್ಲ ಆದರೆ ಭಾಷೆಗಳ ಭಾವೈಕ್ಯತೆ ಇಲ್ಲಿ ಎದ್ದು ಕಾಣುತ್ತದೆ ಎಂದು ಪಾರುಲ್ ಯಾದವ್ ಭಾವುಕರಾಗಿ ನುಡಿದರು.

ತಾಯಿ ಮತ್ತು ಮಗಳ ಮುಗ್ಧತೆ, ಸಂಬಂಧ ಎಷ್ಟು ಗಟ್ಟಿಯಾಗಿರುತ್ತದೆ, ನಿಜವಾದ ಬಂಧನ ಯಾವುದೇ ಕಾರಣಕ್ಕೂ ದೂರ ಮಾಡುವುದಿಲ್ಲ ಅನ್ನುವುದಕ್ಕೆ ಈ ದೇವಕಿನೇ ಸಾಕ್ಷಿ ಎಂದು ರಾಗಿಣಿ ದ್ವಿವೇದಿ ಮುಕ್ತ ಮನಸ್ಸಿನಿಂದ ಹೇಳಿದರು.ಚಲನ ಚಿತ್ರ ವೀಕ್ಷಿಸಿದ ಪ್ರಮುಖ ಅತಿಥಿಗಳು: ಕ್ರೇಜಿ ಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ, ರಾಗಿಣಿ ದ್ವಿವೇದಿ, ಶಿಲ್ಪಾ ಗಣೇಶ್, ಪಾರುಲ್ ಯಾದವ್, ವಿಜಯ್ ರಾಘವೇಂದ್ರ, ಸಂಜನಾ ಗಲ್ರಾನಿ, ತಾರಾ, ಕಾರ್ತಿಕ್ (ಜೆಕೆ), ಸಂಚಾರಿ ವಿಜಯ್, ನಿರಂಜನ್ ದೇಶಪಾಂಡೆ, ಕೃಶಿ ತಾಪಂದ , ದಿವ್ಯಾ ಉರುಡಾಗ, ದೀಪಿಕಾ ದಾಸ್, ರೂಪಿಕಾ ಅನುಪಮ ಗೌಡ, ಸಂತೋಷ್ ಆರ್ಯನ್, ಪ್ರಥಮ್, ಸಂಗೀತ ನಿರ್ದೇಶಕ ಗುರು ಕಿರಣ್ ಮತ್ತು ಕುಟುಂಬ, ನಿರ್ದೇಶಕರಾದ ದಯಾಳ್ ಪದ್ಮನಾಬನ್, ಅರವಿಂದ ಸೇರಿದಂತೆ ಇತರರು.

This Article Has 2 Comments
  1. Pingback: DevOps consulting firm

  2. Pingback: Rescue Tow Fort Wayne IN

Leave a Reply

Your email address will not be published. Required fields are marked *

Translate »
error: Content is protected !!