ದೈವ

Movie Review: ದುಷ್ಟ ಕೂಟದ ವಿರುದ್ಧ ‘ದೈವ’ದ ಅಭಯ

ಚಿತ್ರ: ದೈವ
ನಿರ್ದೇಶನ: ಎಂ ಜೆ ಜಯರಾಮ್
ನಿರ್ಮಾಣ: ಜಯಮ್ಮ ಪದ್ಮರಾಜ್
ತಾರಾ ಬಳಗ: ಎಂ ಜೆ ಜಯರಾಜ್, ನೀತು ರಾಯ್, ಸುರಭಿ ರೆಡ್ಡಿ, ನಿಶ್ಚಿತ ಶೆಟ್ಟಿ, ಬಾಲ ರಾಜವಾಡಿ, ಅರುಣ್ ಬಚ್ಚನ್ ಇತರರು
ರೇಟಿಂಗ್: 3

ಗ್ರಾಮೀಣ ಪ್ರದೇಶ ಒಂದರಲ್ಲಿ ಇರುವ ದುಷ್ಟ ಕೂಟದ ವಿರುದ್ಧ ಜನರನ್ನು ದೈವ ಯಾವ ರೀತಿ ಕಾಯುತ್ತದೆ ಎನ್ನುವುದನ್ನು ಹೇಳುವ ಚಿತ್ರ ಈ ವಾರ ಬಿಡುಗಡೆ ಆಗಿರುವ ‘ ದೈವ ‘.

ಇದೊಂದು ಗ್ರಾಮೀಣ ಭಾಗದಲ್ಲಿ ನಡೆಯುವ ಊರ ಗೌಡನ ದರ್ಪದ ಕಥೆ. ಊರಿನ ಕಾಳೇಗೌಡನಿಗೆ ಹಣದ ಮೇಲೆ ವ್ಯಾಮೋಹ ಆದರೆ ಆತನ ಮಗ ರುದ್ರನಿಗೆ ಹೆಣ್ಣು ಮಕ್ಕಳ ಮೇಲೆ ಕಣ್ಣು. ಇಂಥ ಸಂದರ್ಭದಲ್ಲಿ ಈ ದುಷ್ಟ ಕೂಟಗಳ ವಿರುದ್ಧ ರಕ್ಷಕ ಯಾವ ರೀತಿ ಹೋರಾಡುತ್ತಾನೆ ಎನ್ನುವುದನ್ನು ತಿಳಿಯಲು ಚಿತ್ರವನ್ನು ನೋಡಬೇಕಿದೆ.

ಊರಿನ ಗೌಡ ಕಾಳೇಗೌಡನ ಪಾತ್ರದಲ್ಲಿ ರಾಜ ಬಲವಾಡಿ ಆರ್ಭಟಿಸಿದ್ದಾರೆ. ರುದ್ರನ ಪಾತ್ರದಲ್ಲಿ ಅರುಣ್ ಬಚ್ಚನ್ ಮನೋಜ್ಞವಾಗಿ ನಟಿಸಿದ್ದಾರೆ. ನಾಯಕಿಯರ ಪಾತ್ರದಲ್ಲಿ ನಟಿಸಿರುವ ಸುರಭಿ ರೆಡ್ಡಿ, ನೀತು ರಾಯ್, ನಿಶ್ಚಿತ ಶೆಟ್ಟಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸುವ ಯತ್ನ ಮಾಡಿದ್ದಾರೆ.

ಚಿತ್ರದ ನಿರ್ದೇಶಕ ಹಾಗೂ ನಟ ಎಂ ಜೆ ಜಯರಾಜ್ ಅವರು ಹಳ್ಳಿ ಸೊಗಡಿನ ಬದುಕು, ರೈತರ ಪರದಾಟ, ದೈವದ ಶಕ್ತಿಯನ್ನು ಕಟ್ಟಿಕೊಡುವಲ್ಲಿ ಉತ್ತಮ ಪ್ರಯತ್ನವನ್ನು ಮಾಡಿದ್ದಾರೆ. ಚಿತ್ರದ ಎಲ್ಲಾ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಗ್ರಾಮೀಣ ಸೊಗಡಿನ ಈ ಚಿತ್ರ ಸೂಕ್ಷ್ಮ ಘಟನೆಗಳ ಸುತ್ತ ಸುತ್ತುವ ಜೊತೆಗೆ ಮನೋರಂಜನೆಯ ಅಂಶವನ್ನು ಹೊಂದಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!