ಚಿತ್ರ ನಿರ್ಮಾಣಕ್ಕೆ ಮುಂದಾದ ಮಾಜಿ ಸಚಿವ

ಮಾಜಿ ಸಚಿವ ಸಾ ರಾ ಮಹೇಶ್ ಗೌರಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಕನ್ನಡ ಚಲನಚಿತ್ರ ನಿರ್ಮಾಣಕ್ಕೆ ಕಾಲಿಟ್ಟಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರವನ್ನು ಕಿರಣ್ ವಿಶ್ವನಾಥ್ ನಿರ್ದೇಶಿಸಲಿದ್ದಾರೆ. ಕಿರಣ್ ವಿಶ್ವನಾಥ್ ಅವರು ಈ ಹಿಂದೆ ‘ರನ್ನ’ ಮತ್ತು ‘ವಿಕ್ಟರಿ’ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ನಿರ್ದೇಶಕ ಮತ್ತು ನಿರ್ಮಾಪಕರಿಗೆ ಇದು ಚೊಚ್ಚಲ ಚಿತ್ರವಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಪ್ರಮೋಷನಲ್ ಟೀಸರ್ ಸಾ ರಾ ಮಹೇಶ್ ಅವರನ್ನು ನಿರ್ಮಾಪಕನಾಗಿ ಪರಿಚಯಿಸಿದೆ.

ಸದ್ಯ ನಾಯಕ ಯಾರೆಂಬುದನ್ನು ಚಿತ್ರತಂಡ ಅಂತಿಮಗೊಳಿಸಿಲ್ಲ. ಮುಂದಿನ ವಾರಗಳಲ್ಲಿ ಚಿತ್ರದ ಶೀರ್ಷಿಕೆ ಮತ್ತು ನಾಯಕನನ್ನು ಘೋಷಿಸಲು ಚಿತ್ರತಂಡ ಯೋಜಿಸಿದೆ. ನಾಯಕಿಯಾಗಿ ಪ್ರಿಯಾಂಕಾ ಆಚಾರ್ ಅವರನ್ನು ಅಂತಿಮಗೊಳಿಸಲಾಗಿದೆ. ತರುಣ್ ಕಿಶೋರ್ ನಿರ್ಮಾಣದ ಏಳುಮಲೆ ಚಿತ್ರದಲ್ಲಿ ಕಾಣಿಸಿಕೊಂಡು ಖ್ಯಾತಿ ಪಡೆದ ಪ್ರಿಯಾಂಕಾ ಆಚಾರ್ ಅವರು   ಜೀ ಕನ್ನಡದ ರಿಯಾಲಿಟಿ ಶೋ ‘ಮಹಾನಟಿ’ ಮೂಲಕ ಜನಮನ್ನಣೆ ಗಳಿಸಿದರು.

‘ಯಾರೇ ನೀನು ಚೆಲುವೆ’ ಚಿತ್ರದಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ನಟಿ ಸಂಗೀತಾ ಮಾಧವನ್ ಕನ್ನಡ ಚಿತ್ರರಂಗಕ್ಕೆ ಈ ಚಿತ್ರದ ಮೂಲಕ ಮರಳುತ್ತಿದ್ದಾರೆ.  ಎರಡು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದ  ಸಂಗೀತಾ ಅವರು  ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!