ಬಿಗ್ಬಾಸ್ ವಿನ್ನರ್ ಗಿಲ್ಲಿ ನಟನೆಯ ‘ಸರ್ಕಾರಿ ಶಾಲೆ H8’ ಚಿತ್ರ ಫೆಬ್ರವರಿ 6ರಂದು ಬಿಡುಗಡೆಯಾಗಲಿದೆ.
ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಪ್ರಕಾರದ ಈ ಸಿನಿಮಾದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಗುಣ ಹರಿಯಬ್ಬೆ ಅವರದ್ದು. ಚಿತ್ರದಲ್ಲಿ ಗಿಲ್ಲಿ ನಟನ ಜೊತೆಗೆ ಗುಣ ಹರಿಯಬ್ಬೆ, ಮೇಘಶ್ರೀ, ಜನಪದ ಕಲಾವಿದ ಮೋಹನ್, ಸುಚೇಂದ್ರ ಪ್ರಸಾದ್, ರಾಘವೇಂದ್ರ ರಾಜ್ಕುಮಾರ್, ಜಗಪ್ಪ, ನವಾಜ್, ಸುಶ್ಮಿತಾ ಜಗಪ್ಪ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ‘ಗಿರಿಚಂದ್ರ ಪ್ರೊಡಕ್ಷನ್ಸ್’ ನಿರ್ಮಿಸಿರುವ ಈ ಚಿತ್ರಕ್ಕೆ ತೇಜಸ್ವಿನಿ ಎಸ್. ಹೂಡಿಕೆ ಮಾಡಿದ್ದಾರೆ.
ಬೆಂಗಳೂರು, ಚಿತ್ರದುರ್ಗ, ಶಿರಾ, ಶಿವಮೊಗ್ಗ ಸುತ್ತಮುತ್ತ ‘ಸರ್ಕಾರಿ ಶಾಲೆ H8’ ಚಿತ್ರ ಶೂಟಿಂಗ್ ಮಾಡಲಾಗಿದೆ. ಸಂಗೀತ ನಿರ್ದೇಶನ ವಿಜೇತ್ ಮಂಜಯ್ಯ, ಶರಣ್ ಮತ್ತು ಮೆಹಬೂಬ್ ಸಾಬ್ ಹಾಡುಗಳನ್ನು ಹಾಡಿದ್ದಾರೆ.
ಸಿನಿಮಾ ವಿಗ್ರಹದ ಸುತ್ತ ನಡೆಯುವ ಕಥೆಯನ್ನು ಹೊಂದಿದೆ. ಬಿಗ್ ಬಾಸ್ ಬಳಿಕ ಗಿಲ್ಲಿ ನಟ ಅಪಾರ ಜನಪ್ರಿಯತೆಯನ್ನು ಜನಪ್ರಿಯತೆಯನ್ನು ಪಡೆದಿದ್ದು ಚಿತ್ರವನ್ನು ಪ್ರೇಕ್ಷಕರು ಯಾವ ರೀತಿ ಮೆಚ್ಚುತ್ತಾರೆ ಎಂದು ಕಾದು ನೋಡಬೇಕಿದೆ.
_





Be the first to comment