ಈ ವಾರ ತೆರೆಗೆ ‘ದೇವಕಿ’

ಆರ್.ಸಿ.ಜಿ ಸಿನಿಮಾಸ್ ಲಾಂಛನದಲ್ಲಿ ರವೀಶ್.ಆರ್.ಸಿ ಮತ್ತು ಅಕ್ಷಯ್ ಸಿ.ಎಸ್ ಅವರು ನಿರ್ಮಿಸಿರುವ `ದೇವಕಿ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಹಿಂದೆ `ಮಮ್ಮಿ` ಚಿತ್ರವನ್ನು ನಿರ್ದೇಶಿಸಿದ್ದ ಲೋಹಿತ್ ಹೆಚ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ನೊಬಿನ್ ಪಾಲ್ ಸಂಗೀತ ನೀಡಿದ್ದಾರೆ. ಹೆಚ್.ಸಿ.ವೇಣು ಛಾಯಾಗ್ರಹಣ, ರವಿಚಂದ್ರನ್ ಸಿ ಸಂಕಲನ. ಶಿವಕುಮಾರ್ ಕಲಾ ನಿರ್ದೇಶನ ಹಾಗೂ ಡಾ||ರವಿವರ್ಮ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಗುರುಪ್ರಸಾದ್ ಕಶ್ಯಪ್ ಸಂಭಾಷಣೆ ಬರೆದಿದ್ದಾರೆ.
ಪ್ರಿಯಾಂಕ ಉಪೇಂದ್ರ, ಕಿಶೋರ್, ಸಂಜೀವ್ ಜೈಸ್ವಾಲ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಪುತ್ರಿ ಐಶ್ವರ್ಯ ಉಪೇಂದ್ರ ಅವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

This Article Has 1 Comment
  1. Pingback: devsecops

Leave a Reply

Your email address will not be published. Required fields are marked *

Translate »
error: Content is protected !!