ಒಟಿಟಿಗೆ ‘ಮಾರ್ಕ್’

ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಜಿಯೋ ಹಾರ್ಟ್​​ಸ್ಟಾರ್​​ನಲ್ಲಿ ಜನವರಿ 23 ರಂದು ಬಿಡುಗಡೆ ಆಗಲಿದೆ.

ಮಾರ್ಕ್’ ಸಿನಿಮಾ ಡಿಸೆಂಬರ್ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಭರ್ಜರಿ ಕಲೆಕ್ಷನ್ ಮಾಡಿದೆ.  ಚಿತ್ರಮಂದಿರಗಳಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿರುವಾಗಲೇ ‘ಮಾರ್ಕ್’ ಸಿನಿಮಾ ಒಟಿಟಿಗೆ ಬರುತ್ತಿದೆ. ಸಿನಿಮಾ  ಬೆಂಗಳೂರು ಸೇರಿದಂತೆ ಇನ್ನೂ ಕೆಲ ನಗರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

ಜಿಯೋ ಹಾಟ್​​ಸ್ಟಾರ್​​ನಲ್ಲಿ ‘ಮಾರ್ಕ್’ ಸಿನಿಮಾ ಪ್ರಸಾರ ಆಗಲಿರುವುದನ್ನು ಒಟಿಟಿ ಪ್ರಚಾರ ಮಾಡುತ್ತಿದೆ. ಬೇರೆ ಸಿನಿಮಾಗಳ ನಡುವೆ ‘ಮಾರ್ಕ್’ ಸಿನಿಮಾದ ಜಾಹೀರಾತುಗಳನ್ನು ಪ್ರಸಾರ ಮಾಡಲಾಗುತ್ತಿದೆ.

‘ಮಾರ್ಕ್’ ಸಿನಿಮಾ  ಸುದೀಪ್ ಅವರ  ‘ಮ್ಯಾಕ್ಸ್’ ಸಿನಿಮಾದ ರೀತಿ  ಕಡಿಮೆ ಅವಧಿಯಲ್ಲಿ ನಡೆಯುವ ಕತೆಯೊಂದನ್ನು ಆಧರಿಸಿದ ಆಕ್ಷನ್ ಥ್ರಿಲ್ಲರ್ ಜಾನರ್​​ ಸಿನಿಮಾ ಆಗಿದೆ. ‘ಮ್ಯಾಕ್ಸ್’ ಸಿನಿಮಾ ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ  ‘ಮಾರ್ಕ್’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.  ಸುದೀಪ್ ಜೊತೆಗೆ ತಮಿಳಿನ ಯೋಗಿ ಬಾಬು, ಮಲಯಾಳಂನ ಶೈನ್ ಟಾಮ್ ಚಾಕೊ, ನವೀನ್ ಚಂದ್ರ, ನಾಯಕಿಯಾದ ನಿಶ್ವಿಕಾ ನಾಯ್ಡು, ರೋಷಿನಿ ಪ್ರಕಾಶ್  ನಟಿಸಿದ್ದಾರೆ.

ಮಾರ್ಕ್’ ಸಿನಿಮಾ  2025 ರಲ್ಲಿ ಬಿಡುಗಡೆ ಆದ ಸುದೀಪ್ ನಟನೆಯ ಏಕೈಕ ಸಿನಿಮಾ ಆಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!