‘ಬಾರ್ಡರ್ 2’ ಯಶಸ್ಸಿಗಾಗಿ ಸುನೀಲ್ ಶೆಟ್ಟಿ ಪ್ರಾರ್ಥನೆ

ಬಾಲಿವುಡ್ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿ ಅವರು ‘ಬಾರ್ಡರ್ 2’  ಚಿತ್ರದ ಯಶಸ್ಸಿಗಾಗಿ ಕೊರಗಜ್ಜನ ಆದಿಸ್ಥಳ ಕುತ್ತಾರಿಗೆ  ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುನೀಲ್ ಶೆಟ್ಟಿ, ‘‘ಬಾರ್ಡರ್ 2’ ಚಿತ್ರ ಜನವರಿ 23ರಂದು  ದೇಶಾದ್ಯಂತ ಬಿಡುಗಡೆಯಾಗಲಿದ್ದು, ಚಿತ್ರದ ಯಶಸ್ಸಿಗಾಗಿ ದೈವದ ಆಶೀರ್ವಾದ ಪಡೆಯಲು ಬಂದಿದ್ದೇನೆ ‘ಎಂದು ಅವರು ತಿಳಿಸಿದರು.

“ಮಂಗಳೂರಿಗೆ ಯಾರೇ ಬಂದರೂ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ಕೊಡಲೇಬೇಕು. ಕೊರಗಜ್ಜ ಎಲ್ಲರ ಬಯಕೆಗಳನ್ನು ಈಡೇರಿಸುತ್ತಾರೆ. ನನ್ನ ಮಗ, ಮಗಳು, ಅಳಿಯ ಎಲ್ಲರೂ  ಇಲ್ಲಿಗೆ ಬಂದಿದ್ದಾರೆ. ನನಗೆ ಬಹಳ ದಿನಗಳಿಂದ ಇಲ್ಲಿಗೆ ಬರಬೇಕೆಂಬ ಆಸೆ ಇತ್ತು. ಈಗ ಅದು ನೆರವೇರಿದೆ” ಎಂದು ಹೇಳಿದರು.

‘ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ರೂಪೇಶ್ ಶೆಟ್ಟಿ ನಿರ್ದೇಶನದ ‘ಜೈ’   ತುಳು ಚಿತ್ರದಲ್ಲಿ ನಟಿಸಿದ್ದೇನೆ. ಸದ್ಯಕ್ಕೆ ತುಳು ಅಥವಾ ಕನ್ನಡದಲ್ಲಿ ಹೊಸ ಯೋಜನೆಗಳಿಲ್ಲ’ ಎಂದು  ತಿಳಿಸಿದರು.

ಸುನೀಲ್ ಶೆಟ್ಟಿ  ಪುತ್ರ ಅಹಾನ್ ಶೆಟ್ಟಿ ನಟಿಸಿರುವ ಬಹುನಿರೀಕ್ಷಿತ  ‘ಬಾರ್ಡರ್ 2’ ಚಿತ್ರ ಜನವರಿ 23ರಂದು ಗಣರಾಜ್ಯೋತ್ಸವದ ಹೊಸ್ತಿಲಲ್ಲಿ ದೇಶಾದ್ಯಂತ ಬಿಡುಗಡೆಯಾಗಲಿದೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!