ಬಾಲಿವುಡ್ ನಟಿ ಮತ್ತು ಬಿಗ್ ಬಾಸ್ ಹಿಂದಿ ಮಾಜಿ ಸ್ಪರ್ಧಿ ಕೃತಿ ವರ್ಮಾ, ಗಿಲ್ಲಿ ವೆಂಕಟೇಶ್ ನಿರ್ದೇಶನದ ‘ಕರಿಕಾಡ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಹೊಸದಾಗಿ ಬಿಡುಗಡೆಯಾದ ‘ರತುನಿ ರತುನಿ’ ಹಾಡಿನಲ್ಲಿ ಕೃತಿ ವರ್ಮಾ ಕಾಣಿಸಿಕೊಂಡಿದ್ದಾರೆ.
‘ಇದು ನನ್ನ ಮೊದಲ ಕನ್ನಡ ಚಿತ್ರ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ತಂಡಕ್ಕೆ ನಾನು ಕೃತಜ್ಞನಾಗಿದ್ದೇನೆ. ಭವಿಷ್ಯದಲ್ಲಿ ಹೆಚ್ಚಿನ ಕನ್ನಡ ಯೋಜನೆಗಳಲ್ಲಿ ಕೆಲಸ ಮಾಡಲು ನಾನು ಇಷ್ಟಪಡುತ್ತೇನೆ’ ಎಂದು ಕೃತಿ ವರ್ಮಾ ಹೇಳಿದ್ದಾರೆ.
‘ಕರಿಕಾಡ’ ಚಿತ್ರದಲ್ಲಿ ಕಾಡ ನಟರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ತುಳು ನಟಿ ನಿರೀಕ್ಷಾ ಶೆಟ್ಟಿ ನಟಿಸಿದ್ದಾರೆ. ಬಾಲ ರಾಜವಾಡಿ ಮತ್ತು ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಮಂಜು ಸ್ವಾಮಿ, ಗೋವಿಂದೇ ಗೌಡ, ದಿವಾಕರ್, ಕಾಮಿಡಿ ಕಿಲಾಡಿ ಸೂರ್ಯ, ರಾಕೇಶ್ ಪೂಜಾರಿ, ವಿಜಯ್ ಚಂದೂರ್, ಚಂದ್ರಪ್ರಭಾ, ಕರಿಸುಬ್ಬು, ಗಿರಿ, ಮಾಸ್ಟರ್ ಆರ್ಯನ್ , ಬಾಲ ಕಲಾವಿದೆ ರಿದ್ಧಿಇದ್ದಾರೆ.
ಚಿತ್ರಕ್ಕೆ ಅತಿಶಯ್ ಜೈನ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ಸಂಯೋಜಿಸಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಜೀವನ್ ಗೌಡ ಛಾಯಾಗ್ರಹಣ, ದೀಪಕ್ ಸಿಎಸ್ ಸಂಕಲನ ಮಾಡಿದ್ದಾರೆ.
—–





Be the first to comment