‘ಟಾಕ್ಸಿಕ್’ ಟೀಸರ್‌ ನ ಮಾದಕ ನಟಿ ಯಾರು?

ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದ ‘ಟಾಕ್ಸಿಕ್’ ಟೀಸರ್‌ ನ ಮಾದಕ ನಟಿ ಹಾಲಿವುಡ್‌ನಲ್ಲಿ ಸಕ್ರಿಯವಾಗಿರುವ ಉಕ್ರೇನಿಯನ್-ಅಮೇರಿಕನ್ ನಟಿ ನಟಾಲಿ ಬರ್ನ್ ಎಂದು ಗುರುತಿಸಲಾಗಿದೆ.

‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಟೀಸರ್‌ ನಲ್ಲಿ ಭಾರಿ ಸ್ಫೋಟ ಸಂಭವಿಸುವ ಮೊದಲು ಕಾರಿನೊಳಗೆ  ಮಾದಕ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಇದು ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿದೆ. ಕಾರಿನೊಳಗಿನ ನಟಿ ಯಶ್ ಅವರ ಕಿವಿಯನ್ನು ಕಚ್ಚುತ್ತಿರುವ ದೃಶ್ಯ  ಗಮನ ಸೆಳೆದಿದೆ. ನಟಾಲಿ  ಬರ್ನ್ ‘ಟಾಕ್ಸಿಕ್’ ಚಿತ್ರದಲ್ಲಿ ನಟಿಸುವುದಲ್ಲದೆ  ಸಹ-ನಿರ್ಮಾಪಕಿಯೂ ಆಗಿದ್ದಾರೆ.

ಹಾಲಿವುಡ್‌ ಪ್ರವೇಶಿಸುವ ಮೊದಲು ನಟಾಲಿ ಜಾಗತಿಕ ಮಾಡೆಲಿಂಗ್ ಉದ್ಯಮದಲ್ಲಿ ತನ್ನನ್ನು  ಗುರುತಿಸಿಕೊಂಡಿದ್ದರು. ಅವರು ತರಬೇತಿ ಪಡೆದ ಮಾರ್ಷಲ್ ಕಲಾವಿದೆ ಮತ್ತು ವೃತ್ತಿಪರ ಬ್ಯಾಲೆ ನರ್ತಕಿ ಆಗಿದ್ದಾರೆ. ನಾಲ್ಕು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ‘ಟಾಕ್ಸಿಕ್’  ಟೀಸರ್ ಬಿಡುಗಡೆಯಾದ ತಕ್ಷಣ ನಟಾಲಿಯಾ ಬರ್ನ್  ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ. ಕೇವಲ 24 ಗಂಟೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ಮಂದಿ ನಟಾಲಿ ಬರ್ನ್ ಇನ್‌ಸ್ಟಾಗ್ರಾಮ್ ಖಾತೆ ಫಾಲೋ ಮಾಡಿದ್ದಾರೆ.

ಪ್ಯಾನ್-ಇಂಡಿಯಾ ಆಕ್ಷನ್ ಚಲನಚಿತ್ರಗಳು ಮಾರುಕಟ್ಟೆಯನ್ನು ತುಂಬುತ್ತಿರುವ ಸಮಯದಲ್ಲಿ ಕೇವಲ ಎರಡು ನಿಮಿಷಗಳ ಉದ್ದದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’  ಟೀಸರ್ ತನ್ನ ಸಿನಿಮೀಯ ಭವ್ಯತೆ ಮತ್ತು ನಿಗೂಢ ನಿರೂಪಣೆಯೊಂದಿಗೆ ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದೆ. ಸೂಪರ್‌ಸ್ಟಾರ್ ಯಶ್  ರಗಡ್ ಲುಕ್ ನಲ್ಲಿ ಮರಳುವ ಸೂಚನೆ ನೀಡಿದ್ದಾರೆ.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!