ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಂದಿತಾ, ‘ಲಕ್ಷ್ಮಿಪುತ್ರ’ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.
ಎಪಿ ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಲಕ್ಷ್ಮಿಪುತ್ರ ಚಿತ್ರವನ್ನು ಕಥೆ ಚಿತ್ರಕಥೆ ಸಾಹಿತ್ಯ ಎಪಿ ಅರ್ಜುನ್ ಅವರೇ ಬರೆದಿದ್ದಾರೆ. ವಿಜಯ್ ಸ್ವಾಮಿ ಅವರ ನಿರ್ದೇಶನವಿದೆ. ಈವರೆಗೆ ನಾಯಕಿ ಯಾರೆಂಬುದನ್ನು ಗುಟ್ಟಾಗಿ ಇಟ್ಟಿದ್ದ ಚಿತ್ರತಂಡ ಅಧಿಕೃತವಾಗಿ ವಿಶೇಷ ಪ್ರೋಮೋ ಮೂಲಕ ಚಿತ್ರದ ನಾಯಕಿ ವಂದಿತಾ ಎಂಬುದನ್ನು ಬಹಿರಂಗಪಡಿಸಿದೆ.
ಚಿಕ್ಕಣ್ಣ ಜೊತೆ ಮೊದಲ ಬಾರಿಗೆ ಪರದೆ ಹಂಚಿಕೊಂಡಿರುವ ವಂದಿತಾ ಮಂಡ್ಯ ಮೂಲದ ನಟಿ. ‘ಲಕ್ಷ್ಮಿಪುತ್ರ’ ಚಿತ್ರತಂಡ ಈಗಾಗಲೇ ಹೆಚ್ಚಿನ ಚಿತ್ರೀಕರಣವನ್ನು ಮುಗಿಸಿದೆ.
‘ನಾನು ಮೂಲತಃ ಡ್ಯಾನ್ಸರ್ ಮತ್ತು ರಿಯಾಲಿಟಿ ಶೋಗಳ ಗುರಿಯನ್ನು ಹೊಂದಿದ್ದೆ. ಈ ಆಫರ್ ಆಕಸ್ಮಿಕವಾಗಿ ಬಂದಿತು. ಆಡಿಷನ್‌ಗಳ ಮೂಲಕ ಆಯ್ಕೆಯಾಗುವುದು ದೊಡ್ಡದೆನಿಸಿತು. ಕೆಡಿ ಚಿತ್ರದಲ್ಲಿ ನನಗೆ ಪ್ರಮುಖ ಪಾತ್ರ ಸಿಕ್ಕಿತು. ನಾನು ದೇವಸ್ಥಾನದಿಂದ ಹೊರಬರುತ್ತಿದ್ದಂತೆ ಎಪಿ ಅರ್ಜುನ್ ಸರ್ ಅವರಿಂದ ಕರೆ ಬಂತು. ಎಲ್ಲೋ, ಲಕ್ಷ್ಮಿಪುತ್ರ ಆಧ್ಯಾತ್ಮಿಕವಾಗಿ ಸಂಪರ್ಕ ಹೊಂದಿದಂತೆ ಭಾಸವಾಯಿತು’ ಎಂದು ವಂದಿತಾ ಹೇಳಿದ್ದಾರೆ.
‘ಲಕ್ಷ್ಮಿಪುತ್ರ’ ಚಿತ್ರವನ್ನು ಎಪಿ ಅರ್ಜುನ್ ಅವರ ಪತ್ನಿ ಅನ್ನಪೂರ್ಣ ಅರ್ಜುನ್ ಅವರು ಎಪಿ. ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.
ಚಿತ್ರದಲ್ಲಿ ತಾರಾ, ಕುರಿ ಪ್ರತಾಪ್ ಮತ್ತು ಧರ್ಮಣ್ಣ ಸೇರಿದಂತೆ ಅನೇಕ ತಾರಾಗಣವಿದೆ. ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ, ಎಪಿ ಅರ್ಜುನ್ ಸಾಹಿತ್ಯ, ಗಿರೀಶ್ ಆರ್. ಗೌಡ ಅವರ ಛಾಯಾಗ್ರಹಣವಿದೆ.





Be the first to comment