ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಬೆಂಗಳೂರು ಮತ್ತು ಕೇರಳದ ಕೊಚ್ಚಿಯಲ್ಲಿ ಆರಂಭವಾಗಿದೆ.
ಬೆಂಗಳೂರಿನಲ್ಲಿ ಅಡ್ವಾನ್ಸ್ ಬುಕಿಂಗ್ ಕೆಲ ದಿನಗಳ ಹಿಂದೆಯೇ ಓಪನ್ ಆಗಿದೆ. ಕೊಚ್ಚಿಯಲ್ಲಿ ಇತ್ತೀಚೆಗೆ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ. ಬೆಂಗಳೂರಿನಲ್ಲಿ ಪ್ರಸ್ತುತ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಅಡ್ವಾನ್ಸ್ ಬುಕಿಂಗ್ ಮಾತ್ರವೇ ಲಭ್ಯವಿದೆ.
ಜನವರಿ 9ರ ಬೆಳಿಗ್ಗೆ 6 ಗಂಟೆಯ ವಿಶೇಷ ಶೋ ಟಿಕೆಟ್ಗಳಿಗೆ ಮಾತ್ರ ಅಡ್ವಾನ್ಸ್ ಬುಕಿಂಗ್ ಅವಕಾಶ ನೀಡಲಾಗಿದೆ. ಈ ಶೋಗಳಿಗೆ ಸಾಮಾನ್ಯ ಟಿಕೆಟ್ಗೆ ₹800, ಬಾಲ್ಕನಿ ಟಿಕೆಟ್ಗಳಿಗೆ ₹1000 ದರ ನಿಗದಿಪಡಿಸಲಾಗಿದೆ. ಕೆಲ ಚಿತ್ರಮಂದಿರಗಳಲ್ಲಿ ಈ ದರ ₹1200ರವರೆಗೂ ಇದೆ.
ಕೇರಳದ ಕೊಚ್ಚಿಯಲ್ಲಿ ಬೆಂಗಳೂರಿನಿಗಿಂತ ಮೂರು ರಿಂದ ನಾಲ್ಕು ಪಟ್ಟು ಕಡಿಮೆ ದರದಲ್ಲಿ ಕೊಚ್ಚಿಯಲ್ಲಿ ಟಿಕೆಟ್ ಮಾರಾಟವಾಗುತ್ತಿದೆ. ಅಲ್ಲಿ ಜನವರಿ 9ರ ಬೆಳಿಗ್ಗೆ 6 ಗಂಟೆಯ ವಿಶೇಷ ಶೋ ಆಯೋಜನೆ ಮಾಡಲಾಗಿದ್ದು, ಟಿಕೆಟ್ಗಳ ಪ್ರಾರಂಭಿಕ ಬೆಲೆ ಕೇವಲ ₹120. ಕೆಲವು ಚಿತ್ರಮಂದಿರಗಳಲ್ಲಿ ಗರಿಷ್ಠ ಟಿಕೆಟ್ ದರ ₹350 ಮಾತ್ರ ಇದೆ.
‘ಜನ ನಾಯಗನ್’ ಸಿನಿಮಾ ಜನವರಿ 9ರಂದು ಬಿಡುಗಡೆಯಾಗಲಿದೆ. ಈ ಸಿನಿಮಾ ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ಕಾರಣ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಸಿನಿಮಾಕ್ಕೆ ಭರ್ಜರಿ ಪ್ರಚಾರವೂ ದೊರೆಯುತ್ತಿದೆ. ಸಿನಿಮಾ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮಾತ್ರ ತೆರೆಗೆ ಬರುತ್ತಿದೆ.
—-





Be the first to comment