ಬರಲಿದೆ ‘ದಿ ಕೇರಳ ಸ್ಟೋರಿ’ ಸೀಕ್ವೆಲ್

‘ಲವ್ ಜಿಹಾದ್’ ವಿಷಯವನ್ನು ಆಧರಿಸಿದ ‘ದಿ ಕೇರಳ ಸ್ಟೋರಿ’ ಚಿತ್ರದ ಮುಂದುವರಿದ ಭಾಗ 2026ರಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

‘ದಿ ಕೇರಳ ಸ್ಟೋರಿ 2’ ಚಿತ್ರದ  ಚಿತ್ರೀಕರಣ  ಪೂರ್ಣಗೊಂಡಿದೆ. ‘ದಿ ಕೇರಳ ಸ್ಟೋರಿ’ ಚಿತ್ರದ ಮುಂದುವರಿದ ಭಾಗವನ್ನು ಕೇರಳದಲ್ಲಿ ಚಿತ್ರೀಕರಿಸಲಾಗಿದೆ. ವರದಿಗಳ ಪ್ರಕಾರ ಈ ಭಾಗವು ಹೆಚ್ಚು ಗಂಭೀರ ಮತ್ತು ಕರಾಳ ಕಥೆಯನ್ನು ಒಳಗೊಂಡಿದೆ. ಚಿತ್ರದ  ಪಾತ್ರವರ್ಗ ಮತ್ತು ಇತರ ವಿವರಗಳನ್ನು ಗೌಪ್ಯವಾಗಿಡಲಾಗಿದೆ.

ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ಕಟ್ಟುನಿಟ್ಟಿನ ಭದ್ರತೆ  ಇತ್ತು. ಸೆಟ್​ಗೆ ಫೋನ್ ತರುವಂತೆ ಇರಲಿಲ್ಲ. ಚಿತ್ರೀಕರಣದ ಸಮಯದಲ್ಲಿ, ನಟರು ಮತ್ತು ಇತರರಿಗೆ ಫೋನ್‌ನಲ್ಲಿ ಮಾತನಾಡಲು  ಅವಕಾಶವಿರಲಿಲ್ಲ. ಸೆಟ್‌ನಿಂದ ಏನೂ ಸೋರಿಕೆಯಾಗದಂತೆ ವಿಶೇಷ ಕಾಳಜಿ ವಹಿಸಲಾಯಿತು. ಸಿನಿಮಾ ಫೆಬ್ರವರಿ 27ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ.

023ರಲ್ಲಿ ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ ಸಿನಿಮಾ ವಿವಾದದಲ್ಲಿ ಸಿಲುಕಿದ್ದರೂ,  ಸಾಕಷ್ಟು ಹಣ ಗಳಿಸಿತು. ಸುದೀಪ್ತೋ ಸೇನ್ ನಿರ್ದೇಶನದ ಈ ಸಿನಿಮಾದಲ್ಲಿ ಅದಾ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದರು. ‘ಲವ್ ಜಿಹಾದ್’ ವಿಷಯವನ್ನು ಆಧರಿಸಿದ ಸಿನಿಮಾ ಹಲವು ಕಡೆಗಳಲ್ಲಿ ಬ್ಯಾನ್ ಆಯಿತು.

—–

 

Be the first to comment

Leave a Reply

Your email address will not be published. Required fields are marked *

Translate »
error: Content is protected !!