ಸಾನ್ವಿಗೆ ಸುದೀಪ್ ಬೆಂಬಲ

ಟ್ರೋಲಿಗರಿಗೆ ತಿರುಗೇಟು ನೀಡಿದ್ದ ಮಗಳು ಸಾನ್ವಿ ಸುದೀಪ್  ಅವರ ಹೇಳಿಕೆಯನ್ನು ಕಿಚ್ಚ ಸುದೀಪ್  ಸಮರ್ಥಿಸಿಕೊಂಡಿದ್ದಾರೆ.

ʻನನ್ನ ದೇಹ ಇನ್ಯಾರದ್ದೋ ಚರ್ಚೆಯ ವಸ್ತುವಲ್ಲ. ನನಗೆ ನಿಮ್ಮ ಅಭಿಪ್ರಾಯ ಬೇಕಿದ್ದರೆ ಖಂಡಿತ ಕೇಳುತ್ತೇನೆʼ ಎಂದು ಸಾನ್ವಿ ಸುದೀಪ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಈ ಹೇಳಿಕೆಗೆ  ಚರ್ಚೆ ಜೋರಾಗಿತ್ತು.

ಬೆಂಗಳೂರಿನ  ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ‘ಮಾರ್ಕ್’ ಸಿನಿಮಾ ವೀಕ್ಷಿಸಿ ಮಾತನಾಡಿದ ಸುದೀಪ್, “ನನ್ನ ಮಗಳು ರಿಯಾಕ್ಟ್ ಮಾಡಿದ್ದು ತಪ್ಪಾ? ಯಾವುದೇ ಹೆಣ್ಣುಮಕ್ಕಳಾದ್ರೂ ಮಾತನಾಡ್ತಿದ್ರು ತಾನೆ..? ಹೆಣ್ಣಾಗಿ ಏನ್ ಮಾಡ್ಬೇಕು ಅದನ್ನೇ ಮಗಳು ಮಾಡಿದ್ದಾಳೆ” ಎಂದಿದ್ದಾರೆ.

ಸಾನ್ವಿ ಸುದೀಪ್ ಹಂಚಿಕೊಂಡಿರುವ ಪೋಸ್ಟ್ ಬಗ್ಗೆ ಮಾತನಾಡುತ್ತಾ,  ಸುದೀಪ್  ‘ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ’ ಎಂದಿದ್ದಾರೆ.

ಫ್ಯಾನ್ಸ್‌ವಾರ್ ತೀವ್ರವಾಗಿದ್ದ ಸಂದರ್ಭದಲ್ಲಿ ‘ಮಾರ್ಕ್’ ಸಿನಿಮಾ ಬಿಡುಗಡೆ ಬಳಿಕ ಕೆಲ ಕಿಡಿಗೇಡಿಗಳು ಸುದೀಪ್ ಕುಟುಂಬ ಎಳೆತಂದು ಸಾನ್ವಿ ವಿರುದ್ಧ ಟ್ರೋಲ್ ಮಾಡಿದ್ದರು. ಈ ಘಟನೆ ಬಳಿಕ ಸಾನ್ವಿ ಸುದೀಪ್, ಇನ್‌ಸ್ಟಾ ಸ್ಟೋರಿಯಲ್ಲಿ ತಮ್ಮ ದೇಹದ ಬಗ್ಗೆ ಮಾತನಾಡುವವರಿಗೆ ನೇರ ಸಂದೇಶ ನೀಡಿ, ಮಹಿಳೆಯರ ಗೌರವದ ಕುರಿತು ಪೋಸ್ಟ್ ಮಾಡಿದ್ದರು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!