ವಿವಾದಕ್ಕೆ ತೆರೆ ಎಳೆದ ಸುದೀಪ್

“ನನ್ನ ಮಾತು ಪೈರಸಿ ವಿರುದ್ಧ. ಯಾರ ವಿರುದ್ಧವೂ ಅಲ್ಲ. ಪೈರಸಿ ಬಗ್ಗೆ ಮಾತನಾಡುವ ಹಕ್ಕು ನನಗಿಲ್ಲವಾ?”  ಎಂದು ಕಿಚ್ಚ ಸುದೀಪ್ ಸ್ಪಷ್ಟಪಡಿಸಿದ್ದಾರೆ.

ಮಾರ್ಕ್ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ “ಒಂದು ಪಡೆ ಯುದ್ಧಕ್ಕೆ ಸಜ್ಜಾಗಿದೆ” ಎಂದು ಸುದೀಪ್ ಹೇಳಿದ್ದ ಮಾತು ವಿವಾದಕ್ಕೆ ಕಾರಣವಾಗಿತ್ತು. ಆದರೆ ಆ ಮಾತು ಯಾರ ವಿರುದ್ಧವೂ ಅಲ್ಲ ಎಂದು ಕಿಚ್ಚ ಹೇಳಿದ್ದಾರೆ.

”ಚಿತ್ರರಂಗದಲ್ಲಿ ಹಲವರು ಇದ್ದರೂ ಟೀಕೆ ಮಾತ್ರ ತನ್ನ ಮೇಲೆಯೇ ಬೀಳುತ್ತದೆ. ರಕ್ಷಿತ್, ರಿಷಬ್ ಸೇರಿದಂತೆ ಅನೇಕರಿದ್ದಾರೆ. ಆದರೆ ಹೊಡೆತ ಮಾತ್ರ ಒಂದು ಗಂಟೆಗೆ ನನ್ನ ಮೇಲೆ ಬರುತ್ತದೆ. ನಾನು 45 ಸಿನಿಮಾ ಬಗ್ಗೆ ಮಾತನಾಡಿಲ್ಲ” ಎಂದರು.

ವಿಜಯಲಕ್ಷ್ಮೀ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, “ನನಗೆ ನೇರವಾಗಿ ಹೇಳಿದ್ರೆ ನಾನು ಉತ್ತರ ಕೊಡ್ತೀನಿ. ನನಗೆ ನನ್ನ ಸಿನಿಮಾ ಕಾಪಾಡಿಕೊಳ್ಳಬೇಕಿದೆ. ಜಿದ್ದಾಜಿದ್ದಿ ಮಾಡ್ತಿಲ್ಲ. ನಾನು ಹೇಳಿದ ಮಾತು ನಿಜವಾಗಿಯೂ ವಿವಾದ ಆಗಬೇಕಿದ್ದರೆ ಮರುದಿನವೇ ಬೆಂಕಿ ಹತ್ತಿಕೊಳ್ಳಬೇಕಿತ್ತು. ಎಲ್ಲರೂ ಬಂದು ಮೈಕ್ ಹಿಡಿದು ನೀವು ಯಾಕೆ ಹೀಗೆ ಹೇಳಿದ್ರಿ ಎಂದು ಕೇಳಬೇಕಿತ್ತು. ಆದರೆ ಹಾಗಾಗಿಲ್ಲ. ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರೆ, ಅವರು ಯಾರಿಗೆ ಹೇಳಿದ್ದು ಎಂದು ಕೇಳಬೇಕು. ಪೈರಸಿ ಮಾಡೋರನ್ನ ಕರುಣೆ ಇಲ್ಲದೆ ಒಳಗೆ ಹಾಕಿಸುತ್ತೇವೆ. ” ಎಂದು ಖಡಕ್ ಸಂದೇಶ ನೀಡಿದರು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!