ನಂದಮೂರಿ ಬಾಲಕೃಷ್ಣ ಅಭಿನಯದ ಬಹು ನಿರೀಕ್ಷಿತ ಅಖಂಡ 2 ಚಿತ್ರ ಡಿಸೆಂಬರ್ 12 ರಂದು ಬಿಡುಗಡೆ ಆಗಲಿದೆ.
ಅಖಂಡ 2 ಚಿತ್ರಕ್ಕಿದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿದ್ದು ಚಿತ್ರ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಚಿತ್ರ ಬಿಡುಗಡೆ ಮೇಲಿದ್ದ ತಡೆ ಮದ್ರಾಸ್ ಹೈಕೋರ್ಟ್ ತೆರವು ಮಾಡುತ್ತಲೇ ಚಿತ್ರತಂಡ ಹೊಸ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ.
ಅಖಂಡ 2 ಚಿತ್ರವನ್ನು ನಿರ್ಮಿಸಿದ್ದ 14 ರೀಲ್ಸ್ ಪ್ಲಸ್ ಎಂಟರ್ಟೈನ್ಮೆಂಟ್ ಮತ್ತು ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆಗಳ ನಡುವಿನ ವಿವಾದ ಇತ್ಯರ್ಥವಾಗಿದ್ದು, ನ್ಯಾಯಾಲ ‘ಅಖಂಡ 2’ ಬಿಡುಗಡೆಗೆ ಅನುಮತಿ ನೀಡಿದೆ.
ಅಖಂಡ 2 ಚಿತ್ರ ಡಿಸೆಂಬರ್ 5 ರಂದು ಬಿಡುಗಡೆ ಆಗಬೇಕಿತ್ತು. ಸಿನಿಮಾದ ಅಡ್ವಾನ್ಸ್ ಬುಕಿಂಗ್ ನಡೆದಿತ್ತು. ಅಭಿಮಾನಿಗಳು ಸಹ ಚಿತ್ರಮಂದಿರಗಳನ್ನು ಸಿಂಗರಿಸಿ ಬಾಲಯ್ಯನ ಹೊಸ ಸಿನಿಮಾದ ಸ್ವಾಗತಕ್ಕೆ ಸಜ್ಜಾಗಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಸಿನಿಮಾದ ಬಿಡುಗಡೆಯನ್ನು ರದ್ದು ಮಾಡಲಾಗಿತ್ತು.
‘ಅಖಂಡ 2’ ಸಿನಿಮಾ ನಿರ್ಮಿಸಿದ್ದ 14 ರೀಲ್ಸ್ ಪ್ಲಸ್ ಎಂಟ ರ್ಟೈನ್ಮೆಂಟ್ ಸಂಸ್ಥೆಯ ಮೇಲೆ ಸುಮಾರು 10 ವರ್ಷಗಳ ಹಿಂದಿನ ಹಣಕಾಸು ವಿವಾದದ ಕುರಿತಾಗಿ ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆ ದಾವೆ ಹೂಡಿತ್ತು. ಮಹೇಶ್ ಬಾಬು ಅಭಿನಯದ ನಂಬರ್ 1 ನೆನೊಕ್ಕಡಿನೇ ಮತ್ತು ಆಗಡು ಚಿತ್ರಗಳ ಒಪ್ಪಂದದ ಹಣವನ್ನು 14 ರೀಲ್ಸ್ ಪ್ಲಸ್ ಎಂಟ ರ್ಟೈನ್ಮೆಂಟ್ ಸಂಸ್ಥೆ ಬಾಕಿ ಉಳಿಸಿಕೊಂಡಿತ್ತು. ಇಷ್ಟು ದಿನ ಸುಮ್ಮನಿದ್ದ ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆ ಅಖಂಡ 2 ಚಿತ್ರದ ಬಿಡುಗಡೆ ವೇಳೆ ದಾವೆ ಹೂಡಿ ಸಿನಿಮಾದ ಬಿಡುಗಡೆಗೆ ತಡೆ ನೀಡಿತ್ತು.
ಈಗ ಬಾಕಿ ಚುಕ್ತಾ ಆಗಿರುವುದರಿಂದ ನ್ಯಾಯಾಲಯವು ಸಿನಿಮಾದ ಬಿಡುಗಡೆಗೆ ನೀಡಿದ್ದ ತಡೆಯನ್ನು ತೆಗೆದಿದೆ.
—-





Be the first to comment