ದಕ್ಷಿಣ ಭಾರತದ ಖ್ಯಾತ ನಟಿ ಐಶ್ವರ್ಯಾ ರಾಜೇಶ್ ರಾಜ್‌ಗುರು ನಿರ್ದೇಶನದ ‘ಕ್ರಿಮಿನಲ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಹೆಸರುವಾಸಿಯಾಗಿರುವ ಐಶ್ವರ್ಯಾ ರಾಜೇಶ್ , ಆರಂಭದಲ್ಲಿ ಧನಂಜಯ್ ಮತ್ತು ಶಿವರಾಜ್‌ಕುಮಾರ್ ನಟನೆಯ ಉತ್ತರಾಖಂಡ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಾರೆಂದು ನಿರೀಕ್ಷಿಸಲಾಗಿತ್ತು. ಆ ಯೋಜನೆ ಈಗ ವಿಳಂಬವಾಗಿದೆ. ಕ್ರಿಮಿನಲ್ ಚಿತ್ರವೇ ಅವರ ಚೊಚ್ಚಲ ಕನ್ನಡ ಚಿತ್ರವಾಗಲಿದೆ ಎನ್ನಲಾಗಿದೆ. ಐಶ್ವರ್ಯಾ ರಾಜೇಶ್ ಸೇರ್ಪಡೆಯ ಬಗ್ಗೆ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.
ಕ್ರಿಮಿನಲ್ ಚಿತ್ರವು ನೈಜ ಘಟನೆಗಳಿಂದ ಪ್ರೇರಿತವಾಗಿದೆ. ಇತ್ತೀಚೆಗಷ್ಟೇ ಶೀರ್ಷಿಕೆ ಟೀಸರ್ ಬಿಡುಗಡೆಯಾಗಿದೆ. ರಚಿತಾ ರಾಮ್, ಎಂಟು ವರ್ಷಗಳ ನಂತರ ಧ್ರುವ ಸರ್ಜಾ ಜೊತೆ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.
‘ಕ್ರಿಮಿನಲ್’ ಚಿತ್ರವು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ, ರವಿವರ್ಮ ಛಾಯಾಗ್ರಹಣ ಮತ್ತು ವಿಕ್ರಮ್ ಮೋರ್ ನೃತ್ಯ ಸಂಯೋಜನೆ ಮಾಡಿದ್ದಾರೆ.
‘ಕ್ರಿಮಿನಲ್’ ಚಿತ್ರವನ್ನು ಗೋಲ್ಡ್‌ಮೈನ್ಸ್ ಟೆಲಿಫಿಲ್ಮ್ಸ್‌ನ ಮನೀಶ್ ಶಾ ನಿರ್ಮಿಸಿದ್ದಾರೆ. ಈ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭಿಸಲು ಚಿತ್ರತಂಡ ತಯಾರಿ ನಡೆಸುತ್ತಿದೆ.
—-





Be the first to comment