‘ಬಲರಾಮನ ದಿನಗಳು’ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ

ಬಲರಾಮನ ದಿನಗಳುಚಿತ್ರಕ್ಕೆ ದಕ್ಷಿಣ ಭಾರತದ ಜನಪ್ರಿಯ ಸಂಗೀತ ಸಂಯೋಜಕ ಸಂತೋಷ್ ನಾರಾಯಣನ್ ಅವರು ಸಂಗೀತ ನೀಡಿದ್ದಾರೆ.

ಬಲರಾಮನ ದಿನಗಳುಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಅವರು ಹೀರೋ ಆಗಿ ನಟಿಸಿದ್ದಾರೆ. ನಾಯಕಿಯಾಗಿ ಪ್ರಿಯಾ ಆನಂದ್ ಅಭಿನಯಿಸಿದ್ದಾರೆ.   ಖ್ಯಾತ ಸಂಗೀತ ಸಂಯೋಜಕ ಸಂತೋಷ್ ನಾರಾಯಣನ್ ಅವರನ್ನು ‘ಬಲರಾಮನ ದಿನಗಳು’ ಸಿನಿಮಾ ಮೂಲಕ ಕನ್ನಡಕ್ಕೆ ಕರೆತರಲಾಗಿದೆ.

80ರ ದಶಕದ ಕಥೆಯನ್ನು ಹೊಂದಿರುವ ಬಲರಾಮನ ದಿನಗಳು2026ರಲ್ಲಿ ಬಿಡುಗಡೆ ಆಗಲಿರುವ ಕನ್ನಡದ ಬಿಗ್ ಬಜೆಟ್ ಸಿನಿಮಾಗಳಲ್ಲಿ ನಿರೀಕ್ಷೆ ಹುಟ್ಟಿಸಿದೆ. ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದ್ದು, ಚಿತ್ರತಂಡ ಭರದಿಂದ ಕೆಲಸಗಳನ್ನು ಮಾಡುತ್ತಿದೆ.  ರೆಟ್ರೋ ಕಾಲದ ಕಥೆ ಈ ಸಿನಿಮಾದಲ್ಲಿ ಇರಲಿದೆ.

ಸಂತೋಷ್ ನಾರಾಯಣನ್ ಅವರು ಸಂಗೀತ ನಿರ್ದೇಶಿಸಿದ 51ನೇ ಸಿನಿಮಾ ಕನ್ನಡದ ‘ಬಲರಾಮನ ದಿನಗಳು’. ಡಿಸೆಂಬರ್ ತಿಂಗಳಲ್ಲಿ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಲಿದೆ. ‘ಕಲ್ಕಿ 2898 ಎಡಿ’,  ‘ರೆಟ್ರೋ’, ‘ಕಬಾಲಿ’ ಮುಂತಾದ ಸ್ಟಾರ್ ಸಿನಿಮಾಗಳಿಗೆ ಸಂಗೀತ ನೀಡಿದ ಖ್ಯಾತಿ ಸಂತೋಷ್ ನಾರಾಯಣನ್ ಅವರದ್ದು.

ಪದ್ಮಾವತಿ ಜಯರಾಂ ಮತ್ತು ಶ್ರೇಯಸ್ ಅವರು ‘ಬಲರಾಮನ ದಿನಗಳು’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಕೆ.ಎಂ. ಚೈತನ್ಯ ಅವರು ನಿರ್ದೇಶನ ಮಾಡಿದ್ದಾರೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!