‘ವಾರಣಾಸಿ’ಯಲ್ಲಿ ಹನುಮಂತನ ಪಾತ್ರದಲ್ಲಿ ಸುದೀಪ್‌?

ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ವಾರಣಾಸಿ’ಯಲ್ಲಿ  ಹನುಮಂತನ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ರಾಜಮೌಳಿ ಅವರ ‘ಈಗ’ ಮತ್ತು ‘ಬಾಹುಬಲಿ’ ಸಿನಿಮಾದಲ್ಲಿ ಸುದೀಪ್‌ ನಟಿಸಿದ್ದಾರೆ. ಹೊಸ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುವಂತೆ ಆಫರ್‌ ನೀಡಿದ್ದಾರೆ ಎನ್ನಲಾಗಿದೆ. ಆದರೆ ಸುದೀಪ್ ನಟನೆ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಹೊರ ಬಂದಿಲ್ಲ.

1,300 ಕೋಟಿ ರೂ. ವೆಚ್ಚದಲ್ಲಿ ತಯಾರಾಗುತ್ತಿರುವ  ‘ವಾರಣಾಸಿ’ಯಲ್ಲಿ ಪ್ರಿನ್ಸ್ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ. ಪಾತ್ರದ ಪ್ರಾಮುಖ್ಯತೆಯನ್ನ ಪರಿಗಣಿಸಿ ಸುದೀಪ್ ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರಾಜಮೌಳಿ  ನಿರ್ದೇಶಿಸಿದ್ದ ‘ಈಗ’ ಸಿನಿಮಾ ಟಾಲಿವುಡ್‌ನಲ್ಲಿ ಸೂಪರ್ ಹಿಟ್ ಚಿತ್ರವಾಗಿತ್ತು. ನಂತರ ರಾಜಮೌಳಿ ಅವರ ಬಾಹುಬಲಿ ಭಾಗ 1ರಲ್ಲಿ ಸುದೀಪ್ ಅಭಿನಯಿಸಿದ್ದರು. ಬಾಹುಬಲಿ 2 ಚಿತ್ರದಲ್ಲಿ ಸುದೀಪ್ ಅಭಿನಯಿಸಿರಲಿಲ್ಲ.

ಹನುಮಂತನ ಪಾತ್ರ ಸುದೀಪ್ ಒಪ್ಪಿಕೊಂಡರೆ ವಿಶ್ವವೇ ತಿರುಗಿ ನೋಡುವಂತೆ ನಿರ್ಮಾಣವಾಗುತ್ತಿರುವ ಬಿಗ್ ಬಜೆಟ್ ಚಿತ್ರದಲ್ಲಿ ಸುದೀಪ್ ಇರುವುದು ಕನ್ನಡ ಹಾಗೂ ಕಿಚ್ಚ ಅಭಿಮಾನಿಗಳಲ್ಲಿ ಸಾಕಷ್ಟು ಸಂತಸಕ್ಕೆ ಕಾರಣವಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!