ರಕ್ಷಿತ್ ಶೆಟ್ಟಿ ಟೀಕಿಸಿ ಟ್ರೋಲ್‌ ಆದ ರಶ್ಮಿಕಾ

ನಟಿ ರಶ್ಮಿಕಾ ಮಂದಣ್ಣ ಅವರು ಮಾಜಿ ಪ್ರೇಮಿ ರಕ್ಷಿತ್ ಶೆಟ್ಟಿ ಅವರನ್ನು ಟೀಕಿಸಿ ಮತ್ತೆ ಟ್ರೋಲ್‌ ಆಗಿದ್ದಾರೆ.

ವಿಜಯ್ ದೇವರಕೊಂಡ ಜೊತೆಗಿನ ಪ್ರೇಮ ಮತ್ತು ಮದುವೆಯ ಕುರಿತ ಸುದ್ದಿಗಳು ಹೊರಬರುತ್ತಿರುವ ಸಮಯದಲ್ಲೇ ರಶ್ಮಿಕಾ ಮಂದಣ್ಣ ಅವರು ಮಾಜಿ ಪ್ರೇಮಿಯ ಬಗ್ಗೆ  ನಕಾರಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಕಾರಣವಾಗಿವೆ.

ಸಂದರ್ಶನದಲ್ಲಿ ರಶ್ಮಿಕಾ, ”ಹಿಂದಿನ ಸಂಬಂಧದಲ್ಲಿ ಸ್ವಾತಂತ್ರ್ಯ ಇರಲಿಲ್ಲ. ಆಯ್ಕೆಗಳ ಅವಕಾಶವಿರಲಿಲ್ಲ.   ಈಗಿನ ಸಂಬಂಧದಲ್ಲಿ ನಾನು ನನ್ನತನದಿಂದ ಇರಬಹುದು. ಇಬ್ಬರೂ ಖುಷಿಯಾಗಿದ್ದೇವೆ. ನಮ್ಮ ಸುತ್ತಲೂ ಇರುವವರೂ ಸಂತೋಷದಲ್ಲಿದ್ದಾರೆ” ಎಂದು  ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ  ರಶ್ಮಿಕಾ ತಮ್ಮ ಹಿಂದಿನ ಸಂಬಂಧ ಏಕಮುಖ ಮತ್ತು ಕಠಿಣವಾಗಿತ್ತು ಎಂದು ಹೇಳಿಕೆ ನೀಡಿದ್ದರು. ಆದರೆ ಅದು ಯಾರನ್ನು ಉದ್ದೇಶಿಸಿ ಎಂದು ನಟಿ ಸ್ಪಷ್ಟಪಡಿಸಿಲ್ಲ.

2017ರಲ್ಲಿ  ರಕ್ಷಿತ್ ಶೆಟ್ಟಿ ಜೊತೆಗೆ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಕೆಲವೇ ತಿಂಗಳಲ್ಲಿ ಅದು ಮುರಿದು ಬಿತ್ತು. ಆ ಬಗ್ಗೆ ಇಬ್ಬರೂ ಯಾವುದೇ ಸಾರ್ವಜನಿಕ ಹೇಳಿಕೆ ನೀಡಿರಲಿಲ್ಲ. ಈಗ ‘ದಿ ಗರ್ಲ್‌ಫ್ರೆಂಡ್’ ಚಿತ್ರದ ಬಿಡುಗಡೆಯ ನಂತರ ರಶ್ಮಿಕಾ ನೀಡುತ್ತಿರುವ ಹೇಳಿಕೆಗಳು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!