ಉಪೇಂದ್ರ ನಟನೆಯ ‘ಆಂಧ್ರ ಕಿಂಗ್ ತಾಲ್ಲೂಕ’ ಟ್ರೈಲರ್‌ ವೈರಲ್‌

ರಿಯಲ್‌ ಸ್ಟಾರ್‌ ಉಪೇಂದ್ರ ಮತ್ತು ರಾಮ್ ಪೋತಿನೇನಿ ನಟನೆಯ ತೆಲುಗು ಸಿನಿಮಾ ‘ಆಂಧ್ರ ಕಿಂಗ್ ತಾಲ್ಲೂಕ’ ಟ್ರೈಲರ್ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಟ್ರೈಲರ್ ವಿಡಿಯೋದಲ್ಲಿ ಇದೊಂದು ವಿಭಿನ್ನ ಕಥಾನಕ ಹೊಂದಿರುವ ಸಿನಿಮಾ ಎಂದು ತಿಳಿಯುತ್ತಿದೆ. ಉಪೇಂದ್ರ  ಹೀರೋ ಸೂರ್ಯ ಕುಮಾರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅವರನ್ನು ಆಂಧ್ರ ಕಿಂಗ್ ಎಂದು ಪರಿಚಯಿಸಲಾಗಿದೆ. ರಾಮ್ ಪೋತಿನೇನಿ ಸಣ್ಣ ಊರಿನ ಯುವಕನಾಗಿ ನಟಿಸಿದ್ದು, ಉಪ್ಪಿ ಅಭಿಮಾನಿಯಾಗಿ ಪರಿಚಯಿಸಲಾಗಿದೆ.  ಸಿನಿಮಾ ಅಭಿಮಾನಿ ಮತ್ತು  ಹೀರೋ ನಡುವಿನ ಸಂಬಂಧ, ಸ್ಟಾರ್ ಹೀರೋ ವಿಲನ್ ಆಗುತ್ತಾನೋ ಅಥವಾ ಅಭಿಮಾನಿಯೇ ಮುಖ್ಯ ಪಾತ್ರ ವಹಿಸುತ್ತಾನೋ ಎಂಬುದರತ್ತ ಕಥೆ ಕೊಂಡೊಯ್ಯುತ್ತಿದೆ.

ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ಅಭಿನಯಿಸಿದ್ದಾರೆ. ರಾಹುಲ್ ರಾಮಕೃಷ್ಣ, ಮುರಳಿ ಶರ್ಮಾ, ರಾಜೀವ್ ಕನಕಾಲ, ರಾವ್ ರಮೇಶ್ ಮತ್ತಿತರರು  ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.   ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ. ವಿವೇಕ್ ಮತ್ತು ಮೆರ್ವೀನ್ ಸಂಗೀತ ನೀಡಿದ್ದಾರೆ.

ಉಪೇಂದ್ರ ಅವರ ಒಂಬತ್ತನೇ ತೆಲುಗು ಸಿನಿಮಾ ಇದಾಗಿದೆ. ಸ್ಟಾರ್ ಹೀರೋ ಆಗಿ ಅಭಿನಯಿಸಿರುವ ಈ ಸಿನಿಮಾದಿಂದ ಉಪೇಂದ್ರ ಅಭಿಮಾನಿಗಳು  ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಾಗಿದೆ.  ಸಿನಿಮಾ ನವೆಂಬರ್ 27ರಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಲಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!