ಹಸೆಮಣೆ ಏರಿದ ಗಾಯಕಿ ಅನನ್ಯ ಭಟ್

‘ಸೋಜುಗಾದ ಸೂಜಿ ಮಲ್ಲಿಗೆ’ ಹಾಡಿನಿಂದ ಜನಪ್ರಿಯತೆ ಪಡೆದ ಗಾಯಕಿ ಅನನ್ಯ ಭಟ್ ಹಸೆಮಣೆ ಏರಿದ್ದಾರೆ.

ಕನ್ನಡ ಸಂಗೀತ ಲೋಕದ ಮಧುರ ಕಂಠದ ಹಿನ್ನೆಲೆ ಗಾಯಕಿ ಅನನ್ಯ ಭಟ್ ಅವರು, ಅಂತಾರಾಷ್ಟ್ರೀಯ ಖ್ಯಾತಿಯ ಮ್ಯೂಜಿಷಿಯನ್ ಮತ್ತು ಡ್ರಮ್ಮರ್ ಮಂಜು ಅವರೊಂದಿಗೆ ತಿರುಪತಿಯಲ್ಲಿ ಸಪ್ತಪದಿ ತುಳಿದಿದ್ದಾರೆ.

ಜ್ಯೋತಿಷ್ಯ ಶಾಸ್ತ್ರಜ್ಞ   ಪಂಡಿತ್ ಡಾ. ಅರುಣ್ ಗುರೂಜಿ ಅವರ ನೇತೃತ್ವದಲ್ಲಿ  ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ ಸರಳವಾಗಿ ನೆರವೇರಿತು.

ಅನನ್ಯ ಮತ್ತು ಮಂಜು ಇಬ್ಬರೂ ಸಂಗೀತದಲ್ಲಿ ಆಳವಾದ ಒಡನಾಟ ಹೊಂದಿದ್ದಾರೆ. ಇದು ಪರಿಪೂರ್ಣ ಜೋಡಿ ಎಂದು ಅವರ ತಾಯಿ ಹೇಳಿದ್ದಾರೆ.

ಅನನ್ಯ ಭಟ್ ಅವರು ಕನ್ನಡ ಚಿತ್ರರಂಗದಲ್ಲಿ ಹಲವಾರು ಹಿಟ್ ಹಾಡುಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅವರು  ಮಂಜು ಅವರೊಂದಿಗೆ   ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!