ಹೊಸಬರ ‘ಹಫ್ತಾ’ ಚಿತ್ರ ಅಡಿಬರಹದಲ್ಲಿ ಸೆಂಟಿಮೆಂಟ್ ನಾಟ್ಅಲೋಡ್ಅಂತ ಹೇಳಿಕೊಂಡಿದೆ. ಶೀರ್ಷಿಕೆ ಕೇಳಿದರೆ ಇದೂಂದು ವಸೂಲಿ ಕತೆಇರಬಹುದೆಂದು ಭಾವಿಸಿದರೆ ಅದುಆಗಿರುವುದಿಲ್ಲ. ಕಡಲ ತೀರದ ಭೂಗತಲೋಕ ಮತ್ತು ಸುಪಾರಿಕಿಲ್ಲಿಂಗ್ಜೊತೆಗೆ ಬೇರೆತರಹದ ಮತ್ತೋಂದು ವಿಷಯವನ್ನು ಸೆಸ್ಪನ್ಸ್ಥ್ರಿಲ್ಲಿಂಗ್ ಮಾದರಿಯಲ್ಲಿತೋರಿಸಲಾಗಿದೆ. ಕೆಟ್ಟವರನ್ನು ಸಂಹಾರ ಮಾಡಲುಕೆಟ್ಟವನೇ ಬರಬೇಕೆಂದು ಹೇಳಿದ್ದಾರೆ. ಮಂಗಳೂರು, ಮುರುಡೇಶ್ವರ, ಗೋಕರ್ಣ ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮೂರು ಹಾಡುಗಳಿಗೆ ವಿಜಯ್ಯಾರ್ಡಲ್ಲಿರಾಗ ಸಂಯೋಜಿಸಿದ್ದರೆ, ಹಿನ್ನಲೆ ಸಂಗೀತವನ್ನು ಗೌತಂಶ್ರೀವತ್ಸ ಒದಗಿಸಿದ್ದಾರೆ. ಛಾಯಗ್ರಹಣ ಸೂರಿಸಿನಿಟೆಕ್, ಸಂಕಲನ ರಘುನಾಥ್.ಎಲ್. ನಿರ್ವಹಿಸಿದ್ದಾರೆ. ಹತ್ತು ವರ್ಷಗಳ ಕಾಲ ಹಲವು ನಿರ್ದೇಶಕರ ಬಳಿ ಸಹಾಯಕನಾಗಿದುಡಿದಿರುವ ಪ್ರಕಾಶ್ಹೆಬ್ಬಾಳ ಚಿತ್ರಕ್ಕೆಕತೆ,ಚಿತ್ರಕತೆ, ಸಂಭಾಷಣೆ ಬರೆದು ಚೂಚ್ಚಲಬಾರಿನಿರ್ದೇಶನದಚುಕ್ಕಾಣಿ ಹಿಡಿದಿದ್ದಾರೆ.
ಸುಮಾರು20ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ, ಖಳನಟನಾಗಿ ನಟಿಸಿದ್ದ ವರ್ಧನ್ತೀರ್ಥಹಳ್ಳಿ ಮೊದಲ ಬಾರಿ ನಾಯಕನಾಗಿಎರಡು ಶೇಡ್ಗಳಲ್ಲಿ ಅದರಲ್ಲೂ ಒಂದು ಹಂತದಲ್ಲಿ ಮಂಗಳಮುಖಿಯಾಗಿ ಕಾಣಿಸಿಕೊಂಡಿರುವುದು ವಿಶೇಷ. ಬುದ್ದವಂತಿಕೆಯಿಂದಅಪರಾದದ ಸುಳಿವು ಸಿಗದಂತೆ ಸೈಲೆಂಟ್ಕಿಲ್ಲರ್. ಇವನದುಏನಿದ್ದರೂಗನ್ ಮಾತಾಡುತ್ತೆಎನ್ನುವ ಪಾತ್ರದಲ್ಲಿರಾಘವನಾಗ್ ನಾಯಕನಾಗಿ ಮೂರನೆ ಸಿನಿಮಾ. ಭರತನಾಟ್ಯ ವಿದ್ಯಾರ್ಥಿಯಾಗಿ ಬಿಂಬಶ್ರೀನೀನಾಸಂ, ಕೂರ್ಗ್ ಮೂಲದಮಾಡಲ್ಆಗಿರುವಸೌಮ್ಯತಿಥಿರ ಚೂಚ್ಚಲ ಚಿತ್ರದಲ್ಲೆ ವೇಶ್ಯಯಾಗಿನಟಿಸಿದ್ದಾರೆ.ಮುಖ್ಯ ಖಳನಾಯಕನಾಗಿ ಬಾಲ್ರಾಜ್ವಾಡಿ ಉಳಿದಂತೆ ದಶಾವರಚಂದ್ರು, ಉಗ್ರಂರವಿ ಮುಂತಾದವರುತಂಡದಲ್ಲಿ ಇದ್ದಾರೆ.
ಟ್ರೈಲರ್ಗೆ ಚಾಲನೆ ನೀಡಿದ ಕಂಪೆಗೌಡ ಅಭಿವೃದ್ದಿ ಪ್ರಾಧಿಕಾರದಅಧ್ಯಕ್ಷ ಹೆಚ್.ಎಂ.ಕೃಷ್ಣಮೂರ್ತಿ ಮಾತನಾಡಿ ತುಣುಕುಗಳನ್ನು ನೋಡಿದಾಗ ಒಳ್ಳೆಯ ಚಿತ್ರವಾಗಿದೆ ಅನಿಸುತ್ತದೆ. ಒಳ್ಳೆಯದಾಗಲಿ ಎಂದರು. ಚಲನಚಿತ್ರ ವಾಣಿಜ್ಯ ಮಂಡಳಿ ಗೌ.ಕಾರ್ಯದರ್ಶಿ ಬಾ.ಮ.ಹರೀಶ್, ಖಜಾಂಚಿ ವೀರೇಶ್, ರಕ್ಷಣಾ ವೇದಿಕೆಯಗಾದಿಆಂಜನಪ್ಪ, ಅನಿತಾಬಂಗಾರಪ್ಪ,ಲಲ್ಲೇಶ್ರೆಡ್ಡಿ ಮುಂತಾದವರು ಸಿನಿಮಾದಕುರಿತಂತೆ ಪ್ರಶಂಸೆ ವ್ಯಕ್ತಪಡಿಸಿದರು. ಮೈತ್ರಿಮಂಜುನಾಥ್ ನಿರ್ಮಾಣ ಮಾಡಿದ್ದು, ಬಾಲರಾಜ್.ಟಿ.ಸಿ.ಪಾಳ್ಯ ಪಾಲುದಾರರಾಗಿದ್ದಾರೆ. ಇದೇ ಇಪ್ಪತ್ತೊಂದರಂದು ಬಿಡುಗಡೆ ಮಾಡಲುಯೋಜನೆ ಹಾಕಲಾಗಿದೆ. ಮಾಧ್ಯಮದ ಸಹಕಾರಬೇಕೆಂದು ನಿರ್ಮಾಪಕ ಮೈತ್ರಿಮಂಜುನಾಥ್ಕೋರಿದರು. ಸಹನಿರ್ಮಾಪಕ ಬಾಲರಾಜ್.ಟಿ.ಸಿ.ಪಾಳ್ಯ ಉಪಸ್ತಿತರಿದ್ದರು.
Pingback: Digital Transformation