ಬಲೂಚಿಸ್ತಾನ್ ಬಗ್ಗೆ ಮಾಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಪಾಕಿಸ್ತಾನ ತನ್ನ ಭಯೋತ್ಪಾದಕ ಪಟ್ಟಿಗೆ ಸೇರಿಸಿದೆ.
ಇತ್ತೀಚೆಗೆ ರಿಯಾದ್‌ನಲ್ಲಿ ನಡೆದ Joy Forum 2025 ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಭಾರತೀಯ ಸಿನೆಮಾ ಜಾಗತಿಕ ಮಟ್ಟದಲ್ಲಿ ಹೇಗೆ ಜನಪ್ರಿಯವಾಗಿದೆ ಎಂಬ ಕುರಿತು ಮಾತನಾಡುವಾಗ, “ಇಲ್ಲಿ ಬಲೂಚಿಸ್ತಾನ್, ಆಫ್ಘಾನಿಸ್ತಾನ್ ಮತ್ತು ಪಾಕಿಸ್ತಾನದಿಂದ ಬಂದ ಜನರು ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದ್ದರು. ಈ ಹೇಳಿಕೆಯಲ್ಲಿ ಬಲೂಚಿಸ್ತಾನ್ ಮತ್ತು ಪಾಕಿಸ್ತಾನವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ್ದರಿಂದ ಪಾಕಿಸ್ತಾನ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪಾಕಿಸ್ತಾನವು ಬಲೂಚಿಸ್ತಾನ್ ಪ್ರಾಂತವನ್ನು ತನ್ನ ದೇಶದ ಅವಿಭಾಜ್ಯ ಭಾಗವೆಂದು ಪರಿಗಣಿಸುತ್ತದೆ. ಆದರೆ ಸಲ್ಮಾನ್ ಖಾನ್ ಹೇಳಿಕೆ ಅದರ ವಿರುದ್ಧವಾಗಿರುವುದರಿಂದ, ಅವರ ಹೆಸರನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸಲಾಗಿದೆ. ಈ ಪಟ್ಟಿಯಲ್ಲಿ ಸೇರಿರುವವರಿಗೆ ಪ್ರಯಾಣ ನಿಷೇಧ, ತನಿಖೆಯಂತಹ ಕಾನೂನು ಕ್ರಮಗಳು ಅನ್ವಯಿಸುತ್ತವೆ.
ಬಲೂಚ್ ಪ್ರತ್ಯೇಕತಾವಾದಿ ನಾಯಕರಾದ ಮೀರ್ ಯಾರ್ ಬಲೂಚ್ ಅವರು ಸಲ್ಮಾನ್ ಖಾನ್ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. “ಆರು ಕೋಟಿ ಬಲೂಚ್ ಜನರಿಗೆ ಸಲ್ಮಾನ್ ಖಾನ್ ಸಂತೋಷ ತಂದಿದ್ದಾರೆ” ಎಂದು ಹೇಳಿದ್ದಾರೆ.
ಪಾಕಿಸ್ತಾನದ ಅತಿದೊಡ್ಡ ಪ್ರಾಂತವಾದ ಬಲೂಚಿಸ್ತಾನ್ ಅಭಿವೃದ್ಧಿಯಲ್ಲಿ ಹಿಂದುಳಿದ ಪ್ರದೇಶವಾಗಿದೆ. ಅಲ್ಲಿ 70% ಕ್ಕೂ ಹೆಚ್ಚು ಮಂದಿ ಬಡತನ ರೇಖೆಯ ಕೆಳಗೆ ಬದುಕುತ್ತಿದ್ದಾರೆ.
—–





Be the first to comment