ಜಾನಪದ ಸಂಗೀತಗಾರ, ಗ್ರ್ಯಾಮಿ-ನಾಮನಿರ್ದೇಶಿತ ಸಂಗೀತಗಾರ ಗಾಯಕ ರಘು ದೀಕ್ಷಿತ್ ಮತ್ತು ಕೊಳಲು ವಾದಕಿ, ಗಾಯಕಿ ವಾರಿಜಾಶ್ರೀ ವೇಣುಗೋಪಾಲ್ ಅವರು ಈ ತಿಂಗಳ ಕೊನೆಯಲ್ಲಿ ವಿವಾಹ ಬಂಧನಕ್ಕೊಳಗಾಗಲಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಘು ದೀಕ್ಷಿತ್ ಅವರು, ನನ್ನ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಇದೆಲ್ಲಾ ಆಕಸ್ಮಿಕವಾಗಿ ಹುಟ್ಟಿಕೊಂಡಿತು. ವಾರಿಜಾಶ್ರೀ ವೇಣುಗೋಪಾಲ್ ಅವರ ಪೋಷಕರ ಆಶೀರ್ವಾದದೊಂದಿಗೆ ನಮ್ಮ ಜೀವನದ ಈ ಹೊಸ ಅಧ್ಯಾಯವನ್ನು ಒಟ್ಟಿಗೆ ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ.
ರಘು ದೀಕ್ಷಿತ್ ಹಾಗೂ ವಾರಿಜಶ್ರೀ ವೇಣುಗೋಪಾಲ್ ಅವರು ಸಾಕಷ್ಟು ವಿಡಿಯೊ ಸಾಂಗ್ ಆಲ್ಬಂಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಅವರು ಹಾಡಿದ್ದ ‘ಭರವಸೆಯ ಬದುಕು’ ವಿಡಿಯೋ ಸಾಂಗ್ ಬದುಕಿನಲ್ಲಿ ನೋವುಂಡವರಿಗೆ ಆತ್ಮವಿಶ್ವಾಸ ತುಂಬುವ ರೀತಿ ಇದೆ.
ನೃತ್ಯ ಕಲಾವಿದೆ ಮಯೂರಿ ಉಪಾಧ್ಯಾಯ ಅವರನ್ನು ವಿವಾಹವಾಗಿದ್ದ ಬಹುಭಾಷಾ ಜಾನಪದ ಸಂಗೀತಕ್ಕೆ ಹೆಸರುವಾಸಿಯಾದ ರಘು ದೀಕ್ಷಿತ್ ಅವರು ಕೆಲವು ವರ್ಷಗಳ ಹಿಂದೆ ಭಿನ್ನಾಭಿಪ್ರಾಯ ತಲೆದೋರಿ ವಿಚ್ಛೇದನ ಪಡೆದಿದ್ದರು.
—-





Be the first to comment