ಮಾರ್ನಮಿ

ರಿಶಿತ್ ಶೆಟ್ಟಿ ‘ಮಾರ್ನಮಿ’ ಚಿತ್ರ ವರ್ಷಾಂತ್ಯಕ್ಕೆ ತೆರೆಗೆ

ಕರಾವಳಿ ಭಾಗದ ಸಂಸ್ಕೃತಿಯ ಕುರಿತಾದ ಚಿತ್ರ ಮಾರ್ನಮಿ ಈ ವರ್ಷದ ಕೊನೆಗೆ ತೆರೆಗೆ ಬರಲು ಸಿದ್ಧವಾಗಿದೆ.

ಕಥೆ ಚಿತ್ರಕಥೆ ಬರೆಯುವ ಜೊತೆಗೆ ರಿಶಿತ್ ಶೆಟ್ಟಿ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಗುನಾಧ್ಯ ಬ್ಯಾನರ್ ಅಡಿಯಲ್ಲಿ ಶಿಲ್ಪ ನಿಶಾಂತ್ ಅವರು ಚಿತ್ರವನ್ನು ನಿರ್ಮಿಸಿದ್ದಾರೆ.

ಚಿತ್ರದ ನಾಯಕ ನಟನಾಗಿ ರಿಥ್ವಿಕ್ ಮಠದ್ ಅವರು ಕಾಣಿಸಿಕೊಂಡಿದ್ದಾರೆ. ಚೈತ್ರ ಜೆ ಆಚಾರ್ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಮೂರು ಟೀಸರ್ ಗಳು ಈಗಾಗಲೇ ಬಿಡುಗಡೆಯಾಗಿದ್ದು ನೋಡುಗರ ಗಮನವನ್ನು ಸೆಳೆದಿವೆ.

ಮಾರ್ನಮಿ

ಚಿತ್ರ ದಸರಾ ಹಬ್ಬದ ಸಂದರ್ಭದಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಸುಂದರವಾದ ಪ್ರೇಮಕಥೆಯನ್ನು ಚಿತ್ರದಲ್ಲಿ ಹೇಳುವ ಯತ್ನ ಮಾಡಿದ್ದೇನೆ. ನವೆಂಬರ್ ತಿಂಗಳಿನಲ್ಲಿ ಚಿತ್ರ ಬಿಡುಗಡೆ ಮಾಡುವ ಬಗ್ಗೆ ಯೋಜನೆ ಇದೆ ಎಂದು ನಿರ್ದೇಶಕರು ಹೇಳಿದ್ದಾರೆ.

ಚಿತ್ರದ ತಾರಾ ಬಳಗದಲ್ಲಿ ಸುಮನ್ ತಲ್ವಾರ್, ಪ್ರಕಾಶ್ ತುಮಿನಾಡು, ಸ್ವರಾಜ್ ಶೆಟ್ಟಿ, ಮೈ ರಾಮದಾಸ್ ಇತರರು ನಟಿಸಿದ್ದಾರೆ.

ಭೀಮ ಸಿನಿಮಾ ಖ್ಯಾತಿಯ ಶಿವಸೇನಾ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಚರಣ್ ರಾಜ್ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ವರ್ಷ ಆಚಾರ್ ವಸ್ತ್ರ ವಿನ್ಯಾಸದ ಹೊಣೆಯನ್ನು ಹೊತ್ತಿದ್ದಾರೆ.

ಮಾರ್ನಮಿ

Be the first to comment

Leave a Reply

Your email address will not be published. Required fields are marked *

Translate »
error: Content is protected !!