ಒಟಿಟಿ ಪ್ರಾರಂಭಿಸಲು ಮುಂದಾದ ರಾಜ್ಯ ಸರ್ಕಾರ

 ರಾಜ್ಯ ಸರ್ಕಾರ ಒಟಿಟಿ ಪ್ರಾರಂಭಿಸಲು ಮುಂದಾಗಿದ್ದು, ಇದಕ್ಕಾಗಿ ಸಮಿತಿ ರಚನೆಯನ್ನು ಮಾಡಿದೆ.

ಕನ್ನಡ ಸಿನಿಮಾಗಳನ್ನು ಒಟಿಟಿಗಳು ನಿರ್ಲಕ್ಷ್ಯ ಮಾಡುತ್ತಿವೆ. ಕನ್ನಡ ಸಿನಿಮಾಗಳನ್ನು  ಖರೀದಿ  ಮಾಡುತ್ತಿಲ್ಲ ಎಂಬ ದೂರು ಮೊದಲಿನಿಂದ ಇದೆ. ಕನ್ನಡ ಚಿತ್ರರಂಗದ ಹಲವು ನಿರ್ಮಾಪಕರು, ನಿರ್ದೇಶಕರುಗಳು ಈ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಇದೀಗ  ಸ್ವತಃ ರಾಜ್ಯ ಸರ್ಕಾರ  ಹೊಸ  ಒಟಿಟಿ ಪ್ರಾರಂಭಕ್ಕೆ ಮುಂದಾಗಿದೆ.

ಒಟಿಟಿ ಸ್ಥಾಪನೆಗೆ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯು ಒಟಿಟಿ ನಿರ್ಮಾಣ ಅದರ ಕಾರ್ಯವೈಖರಿ ಇನ್ನಿತರೆಗಳ ಬಗ್ಗೆ ವಿವರವಾದ ನೀಲನಕ್ಷೆಯನ್ನು ತಯಾರು ಮಾಡುತ್ತಿದೆ. ಒಟಿಟಿ ನಿರ್ಮಾಣಕ್ಕೆ ತಗಲುವ ವೆಚ್ಚ, ಸರ್ಕಾರದಿಂದ ಬೇಕಾಗುವ ಅನುದಾನ  ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಮಾಹಿತಿ ಮತ್ತು ಪ್ರಸಾರ ಇಲಾಖೆಯ ಆಯುಕ್ತರು  ಸಮಿತಿಯ ಅಧ್ಯಕ್ಷರಾಗಿರುತ್ತಾರೆ.

ಸಮಿತಿಯಲ್ಲಿ ಕಂಠೀರವ ಸ್ಟುಡಿಯೋದ ಅಧ್ಯಕ್ಷ ಮೆಹಬೂಬ್ ಪಾಷಾ,  ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ, ನಿರ್ಮಾಪಕ ಕೆಪಿ ಶ್ರೀಕಾಂತ್, ರಾಕ್​​ಲೈನ್ ವೆಂಕಟೇಶ್,  ನಟ  ದುನಿಯಾ ವಿಜಯ್, ಚಲನಚಿತ್ರ ಅಕಾಡೆಮಿ ಸದಸ್ಯ ಐವಾನ್ ಡಿಸೋಜಾ  ಇದ್ದಾರೆ.

ಕೇರಳದಲ್ಲಿ 2024 ರಲ್ಲಿ  ಅಲ್ಲಿನ ಸರ್ಕಾರಒಟಿಟಿ ಫ್ಲ್ಯಾಟ್​​ಪಾರ್ಮ್ ನಿರ್ಮಾಣ ಮಾಡಿತು. ಸಿ ಸ್ಪೇಸ್ ಹೆಸರಿನ  ಒಟಿಟಿ ಪ್ಲ್ಯಾಟ್​​ಫಾರ್ಮ್  ಮಲಯಾಳಂ ಸಿನಿಮಾಗಳನ್ನು ಮಾತ್ರ ಪ್ರದರ್ಶಿಸುತ್ತಿದೆ.   ಈ ಒಟಿಟಿಯಿಂದಾಗಿ ಕಡಿಮೆ ದರಕ್ಕೆ ಮಲಯಾಳಂ ಸಿನಿಮಾಗಳನ್ನು ಪ್ರೇಕ್ಷಕರು ನೋಡುವಂತಾಗಿದೆ.  ಒಟಿಟಿಯಲ್ಲಿ ಎಷ್ಟು ಹಣ ಬರುತ್ತದೆಯೋ ಅದರಲ್ಲಿ 50%  ನಿರ್ಮಾಪಕರಿಗೆ ನೀಡಲಾಗುತ್ತದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!