ಸಹ್ಯಾದ್ರಿ

ಆರು ಭಾಷೆಗಳಲ್ಲಿ ಬರಲಿದೆ ಸಹ್ಯಾದ್ರಿ

ಆರ ಖ್ಯಾತಿಯ ರೋಹಿತ್ ನಟಿಸಿ, ನಿರ್ದೇಶನ ಮಾಡಿರುವ ಮೊದಲ ಚಿತ್ರ ಸಹ್ಯಾದ್ರಿ ಒಟ್ಟು 6 ಭಾಷೆಗಳಲ್ಲಿ ತೆರೆಗೆ ಬರಲಿದೆ.

ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿ ಚಿತ್ರದ ಅಪ್ಡೇಟ್ ನೀಡಿದೆ.

ಚಿತ್ರತಂಡ ಮತ್ತೊಂದು ಹಂತದ ಶೂಟಿಂಗ್ ಗೆ ಸಿದ್ಧತೆ ನಡೆಸುತ್ತಿದೆ. ಆಧ್ಯಾತ್ಮಿಕ ವಿಷಯ ಹಾಗೂ ಫ್ಯಾಂಟಸಿ ಅಂಶಗಳು ಇರುವ ಈ ಚಿತ್ರದಲ್ಲಿ ವಿ ಎಫ್ ಎಕ್ಸ್ ಬಳಕೆ ಮಾಡಲು ಚಿತ್ರತಂಡ ಮುಂದಾಗಿದೆ.

ಫಸ್ಟ್ ಲುಕ್ ಟೀಸರ್ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಸಂಗೀತ ಹಾಗೂ ಹಾಡುಗಳ ಕೆಲಸ ಭರದಿಂದ ನಡೆಯುತ್ತಿದೆ. ಈಗಾಗಲೇ ಚಿತ್ರೀಕರಣದ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭಗೊಂಡಿವೆ.

ಈ ವರ್ಷದ ಅಂತ್ಯಕ್ಕೆ ಸಹ್ಯಾದ್ರಿ ತೆರೆಯ ಮೇಲೆ ಬರಲಿದೆ. ಚಿತ್ರಕ್ಕೆ ವಿನೋದ್ ಲೋಕಣ್ಣನವರ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!