ಅ.2ರಂದು ಕಾಂತಾರ ಚಾಪ್ಟರ್ 1 ಬಿಡುಗಡೆ ಆಗುತ್ತಿರುವ ಬೆನ್ನಲ್ಲೇ ಹೊಂಬಾಳೆ ಫಿಲಂಸ್, ರಾಜ್ಯ ಸರಕಾರದ 200 ರೂ. ಮಿತಿಯ ಟಿಕೆಟ್ ದರವನ್ನು ಪ್ರಶ್ನಿಸಿ ಸಂಘರ್ಷದ ಹಾದಿ ಹಿಡಿದಿದೆ.
ಟಿಕೆಟ್ ದರವನ್ನು 200 ರೂ ಗಳಿಗೆ ಮಿತಿಗೊಳಿಸಿರುವುದನ್ನು ಪ್ರಶ್ನಿಸಿ ಹೊಂಬಾಳೆ ಅರ್ಜಿ ಸಲ್ಲಿಸಿದ್ದು ಹೈಕೋರ್ಟಿನಲ್ಲಿ ವಾದ-ಪ್ರತಿವಾದಗಳು ನಡೆದಿವೆ. ಇದರ ತೀರ್ಪು ಇನ್ನಷ್ಟೇ ಬರಬೇಕಿದೆ.
ಹೊಂಬಾಳೆ ಚಿತ್ರ ಸಂಸ್ಥೆ, ಕಾಂತಾರ ಚಿತ್ರಕ್ಕೆ ಹಾಕಿರುವ ಬಜೆಟ್ ದೊಡ್ಡದು. ಹೀಗಾಗಿ ಟಿಕೆಟ್ ದರ ಮಿತಿ ಬೇಡ ಎನ್ನುವ ವಾದ ಮಂಡಿಸಿದೆ. ಈ ಬಗ್ಗೆ ಸರ್ಕಾರದ ಬಳಿ ಆರಂಭದ ವಾರಗಳಲ್ಲಿ ಹೆಚ್ಚಿನ ದರದ ಟಿಕೆಟ್ ವಿಷಯದ ಬಗ್ಗೆ ಮಾತುಕತೆ ನಡೆಸದೆ ಕೋರ್ಟ್ ಮೆಟ್ಟಿಲೇರಿದೆ.
ವಿಜಯ್ ಕಿರಗಂದೂರು ಅವರು ಕರ್ನಾಟಕದಲ್ಲಿ ಟಿಕೆಟ್ ದರಕ್ಕೆ ಮಿತಿ ಹೇರುವುದರಿಂದ ನಷ್ಟವಾಗುತ್ತದೆ ಎಂದು ವಾದ ಮಾಡಿದ್ದಾರೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 200 ರೂ. ಟಿಕೆಟ್ ದರದ ಮಿತಿ ಇದೆ. ಹೊಂಬಾಳೆ ಈ ರಾಜ್ಯದಲ್ಲಿ ಟಿಕೆಟ್ ದರ ಕಡಿಮೆ ಇರುವ ಬಗ್ಗೆ ಮಾತ್ರ ಏನನ್ನೂ ಮಾತನಾಡಿಲ್ಲ.
ಹೈಕೋರ್ಟ್ ಕರ್ನಾಟಕದಲ್ಲಿ ಟಿಕೆಟ್ ದರಕ್ಕೆ ಮಿತಿ ಹೇರಿರುವ ಬಗ್ಗೆ ಯಾವ ರೀತಿಯ ತೀರ್ಪು ನೀಡುತ್ತದೆ ಎನ್ನುವುದು ಕಾದು ನೋಡಬೇಕಿದೆ. ಒಂದು ವೇಳೆ ರಾಜ್ಯ ಸರಕಾರದ 200 ರೂ. ಮಿತಿಯ ಟಿಕೆಟ್ ದರವನ್ನು ಪುರಸ್ಕಾರ ಮಾಡಿದರೆ ಹೊಂಬಾಳೆ ಫಿಲಂಗೆ ಕಾಂತಾರ 1 ಕಲೆಕ್ಷನ್ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
_





Be the first to comment