ಮಾಯಾವಿ

Movie Review: ‘ಮಾಯಾವಿ’ಯ ಮಾಯಾಲೋಕ

ಚಿತ್ರ: ಮಾಯಾವಿ
ನಿರ್ದೇಶನ: ಶಂಕರ್ ಜಿ
ನಿರ್ಮಾಣ: ಡಾ. ಎಚ್ ಮಹಂತೇಶ್
ತಾರಾ ಬಳಗ: ರಘುರಾಮ್, ನಿಶ್ಚಿತಾ ಶೆಟ್ಟಿ, ಎಂ ಕೆ ಮಠ, ಸುರೇಶ್ ಬಾಬು, ಖುಷಿ ಗೌಡ, ಶಿಲ್ಪಾ, ಇತರರು
ರೇಟಿಂಗ್: 3.5/5

ತಂತ್ರಜ್ಞಾನದ ಒಳಗೆ ನಡೆಯುವ ಮಾಯಾವಿಯ ನಿಗೂಢ ಸಾವಿನ ಕಥೆಯ ಚಿತ್ರ ಈ ವಾರ ತೆರೆಗೆ ಬಂದಿರುವ ‘ ಮಾಯಾವಿ ‘ ಸಿನಿಮಾ.

ಗ್ರಾಮೀಣ ಪ್ರದೇಶದ ಯುವಕ ರಘು ಉತ್ತಮವಾಗಿ ಓದಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೊಡುಗೆ ನೀಡಲು ಬಯಸುತ್ತಾನೆ. ಬೆಂಗಳೂರಿಗೆ ಬಂದು ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಆ್ಯಪ್ ಕಂಡುಹಿಡಿಯುವ ಅವನಿಗೆ ತಂಗಿ ಮಾಯಾ ನಿಗೂಢವಾಗಿ ಸಾವನ್ನಪ್ಪಿದ ವಿಚಾರ ನಡೆಯುತ್ತದೆ.

ಈ ಬಗ್ಗೆ ತಾನು ಕಂಡುಹಿಡಿದ ಆ್ಯಪ್ ಮೂಲಕ ಹುಡುಕಾಟ ನಡೆಸುವ ರಘುವಿಗೆ ಮಾಯಾಳ ಸಾವಿನ ಹಿಂದಿನ ರಹಸ್ಯಗಳು ಬಯಲಾಗುತ್ತವೆ. ಮಾಯಾವಿ ರಘು ಇದನ್ನು ಹೇಗೆ ಬಯಲು ಮಾಡುತ್ತಾನೆ ಎನ್ನುವುದು ಚಿತ್ರದ ಕಥೆಯಾಗಿದೆ.

ಇದೊಂದು ಸಸ್ಪೆನ್ಸ್, ಕ್ರೈಂ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿರುವ ಚಿತ್ರ. ನಿರ್ದೇಶಕರು ನಿಗೂಢ ಕೊಲೆಯ ಸುತ್ತ ಚಿತ್ರವನ್ನು ಹೆಚ್ಚು ಕೇಂದ್ರೀಕರಿಸಿದ್ದಾರೆ.

ನಾಯಕನ ಪಾತ್ರದಲ್ಲಿ ರಘುರಾಮ್, ನಾಯಕಿಯಾಗಿ ನಿಶ್ಚಿತಾ ಶೆಟ್ಟಿ, ಉತ್ತಮವಾಗಿ ನಡೆಸಿದ್ದಾರೆ. ಸಹ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಯತ್ನ ಮಾಡಿದ್ದಾರೆ.

ಚಿತ್ರದಲ್ಲಿ ಚಿತ್ರದುರ್ಗ ಸುತ್ತಮುತ್ತಲಿನ ಸುಂದರ ತಾಣಗಳನ್ನು ಮನಸೆಳೆಯುವಂತೆ ತೋರಿಸಲಾಗಿದೆ. ವಿಜಯ ಪ್ರಕಾಶ್ ಹಾಡಿರುವ ಆವರಿಸು ಗೀತೆ ಪ್ರೇಕ್ಷಕರನ್ನು ಕಾಡುತ್ತದೆ.

ಒಳ್ಳೆಯ ಪ್ರಯತ್ನವಾಗಿ ಚಿತ್ರ ಮೂಡಿ ಬಂದಿದೆ. ಹೊಸ ಚಿತ್ರ ನೋಡಬೇಕು ಎನ್ನುವವರಿಗೆ ಮಾಯಾವಿ ಇಷ್ಟವಾಗಬಹುದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!