ಚಿತ್ರ : ಓಂ ಶಿವಂ
ನಿರ್ದೇಶನ : ಆಲ್ವಿನ್
ನಿರ್ಮಾಪಕ : ಕೃಷ್ಣ
ತಾರಾ ಬಳಗ : ಭಾರ್ಗವ್ ಕೃಷ್ಣ, ವಿರಾನಿಕಾ ಶೆಟ್ಟಿ, ಬಲ ರಾಜವಾಡಿ, ಕಾಕ್ರೋಚ್ ಸುದೀಪ್ ಸುಧಿ, ಉಗ್ರಮ್ ರವಿ ಇತರರು
ರೇಟಿಂಗ್ : 3.5/5
ನಿಷ್ಕಲ್ಮಶ ಪ್ರೀತಿಯನ್ನು ಹಾಳು ಮಾಡಲು ನಾಯಕಿಯ ತಾಯಿ ನಡೆಸುವ ವಾಮಾಚಾರ ಪ್ರಯೋಗದಲ್ಲಿ ಪ್ರೇಮಿಗಳು ಗೆಲ್ಲುತ್ತಾರೆಯೇ ಎನ್ನುವ ಕುತೂಹಲ ಭರಿತ ಕಥೆಯ ಚಿತ್ರ ಈ ವಾರ ತೆರೆಗೆ ಬಂದಿರುವ ಓಂ ಶಿವಂ.
ಚಿತ್ರದ ಶೀರ್ಷಿಕೆಯಲ್ಲಿರುವ ಶಿವ ನಾಯಕ ಪಾತ್ರಧಾರಿ. ಇವನು ಬಡವ ಎನ್ನುವ ಕಾರಣಕ್ಕೆ ನಾಯಕಿಯ ತಾಯಿ ಪ್ರೇಮಿಗಳಿಬ್ಬರನ್ನು ಬೇರ್ಪಡಿಸಲು ವಾಮಾಚಾರದ ಮೊರೆ ಹೋಗುತ್ತಾಳೆ. ಈ ಸಂದರ್ಭದಲ್ಲಿ ನಾಯಕಿ ತಾನು ಸತ್ತಂತೆ ನಟಿಸುತ್ತಾಳೆ. ಇದನ್ನು ತಿಳಿದ ನಾಯಕ ಕುಡಿತದ ದಾಸ ಆಗುವ ಜೊತೆಗೆ ತಾನು ಸಾಯಲು ಮುಂದಾಗುತ್ತಾನೆ. ನಾಯಕನ ಅಸಹಾಯಕ ಸ್ಥಿತಿಯನ್ನು ಬಳಸಿಕೊಳ್ಳುವ ಪೊಲೀಸ್ ಅಧಿಕಾರಿ ನಾಯಕ ಕೊಲೆಯೊಂದರಲ್ಲಿ ಸಿಕ್ಕಿಕೊಳ್ಳುವಂತೆ ಮಾಡುತ್ತಾನೆ. ನಾಯಕ ಕೊಲೆ ಪ್ರಕರಣದಿಂದ ಬಚವಾಗುತ್ತಾನೆಯೇ? ಪ್ರೇಮಿಗಳಿಬ್ಬರ ಕಥೆ ಏನಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಚಿತ್ರವನ್ನು ನೋಡಬೇಕಿದೆ.
ನಾಯಕನ ಪಾತ್ರಕ್ಕೆ ಭಾರ್ಗವ್ ನ್ಯಾಯ ಒದಗಿಸಿದ್ದಾರೆ. ನಾಯಕಿ ವಿರಾನಿಕಾ ಶೆಟ್ಟಿ ಅಭಿನಯದಲ್ಲಿ ಗೆದ್ದಿದ್ದಾರೆ. ಇಬ್ಬರ ಪಾತ್ರಗಳು ಚಿತ್ರಮಂದಿರಗಳಿಂದ ಆಚೆ ಬಂದ ಬಳಿಕವೂ ಕಾಡುತ್ತದೆ.
ಅದ್ದೂರಿಯಾಗಿ ನಿರ್ಮಾಣಗೊಂಡಿರುವ ಚಿತ್ರ ಘನತೆಗಾಗಿ ಮಕ್ಕಳ ಜೀವನವನ್ನು ಹಾಳು ಮಾಡಬೇಡಿ ಎನ್ನುವ ಸಂದೇಶವನ್ನು ನೀಡುತ್ತದೆ. ಓಂ ಶಿವಂ ಪ್ರೇಮದ ಜೊತೆಗೆ ಕಾಡುವ ಚಿತ್ರವಾಗಿ ಪ್ರೇಕ್ಷಕರ ಗಮನ ಸೆಳೆಯುತ್ತದೆ.
___





Be the first to comment