ಪದ್ಮಾವತಿ ಗೆ ಯು ಸರ್ಟಿಫಿಕೇಟ್

ರಾವ್ & ರಾವ್ ಸಿನಿಮಾಸ್ ಲಾಂಛನದಲ್ಲಿ ದಾಮೋದರ್ ರಾವ್, ನಾಮದೇವ ಭಟ್ಟರ್ ನಿರ್ಮಿಸುತ್ತಿರುವ ‘ಪದ್ಮಾವತಿ’ ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ ಯು ಸರ್ಟಿಫಿಕೇಟ್ ನೀಡಿದೆ. ವಿಕ್ರಮ್ ಆರ್ಯ ಹಾಗೂ ದಾಮೋದರ್ ಪಾರಗೆ ಇಬ್ಬರು ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಪದ್ಮಾವತಿ ಚಿತ್ರದಲ್ಲಿ ಹೆಣ್ಣಿನ ಮನದ ಭಾವನೆಗಳನ್ನು ಆಕೆಯ ತಪ್ಪು ಒಪ್ಪುಗಳನ್ನು ಹೇಳುವಂತಹ ಕಥಾಹಂದರವಿದ್ದು ಒಂದು ಪಕ್ಕಾ ಲವ್ ಸ್ಟೋರಿ ಹೊಂದಿದೆ. ಇದು ಮಹಿಳಾಪ್ರಧಾನ ಚಿತ್ರವೂ ಆಗಿದೆ. ಈ ಚಿತ್ರವನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಮಿಥುನ್ ಚಂದ್ರಶೇಖರ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಶೋಯಬ್ ಅಹಮ್ಮದ್ ಛಾಯಾಗ್ರಹಣ, ದಿನೇಶ್‍ಕುಮಾರ್ ಸಂಗೀತ, ಈಶ್ವರ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ, ತ್ರಿಭುವನ್ ನೃತ್ಯನಿರ್ದೇಶನ, ಪ್ರೇಮ್ ಸಾಯಿ ಸಾಹಿತ್ಯ, ಲತ ಎಸ್. ಕಥೆ –ಚಿತ್ರಕತೆ ಇದೆ. ವಿಕ್ರಮ್ ಆರ್ಯ, ಸಾಕ್ಷಿ ಮೇಘನಾ, ದಾಮೋದರ್ ಪಾರಗೆ, ರಾಘವ ಕಲಾಲ್, ನಭಿರಸುಲ್, ಸುರೇಶ್, ಸ್ವಾಮಿಗೌಡ, ಅಭಿಲಾಷ್, ಶರಣ್ ಗಿನ್‍ಕೇರಿ, ಶಿವಮೊಗ್ಗ ರಾಮಣ್ಣ, ಕೀರ್ತಿ ಸಿ.ಎನ್., ರಾಜೇಶ್ವರಿ ಪಾಂಡೆ ಅರ್ಚನಾ ಶೆಟ್ಟಿ ಇನ್ನು ಮುಂತಾದವರ ತಾರಾಬಳಗವಿದೆ.

This Article Has 1 Comment
  1. Pingback: 2outsider

Leave a Reply

Your email address will not be published. Required fields are marked *

Translate »
error: Content is protected !!