300 ಕೋಟಿ ರೂ. ಗಳಿಸಿದ ‘ಮಹಾವತಾರ ನರಸಿಂಹ’

ಕನ್ನಡದ ಮೊಟ್ಟ ಮೊದಲ ಆ್ಯನಿಮೇಷನ್ ಚಿತ್ರ ‘ಮಹಾವತಾರ ನರಸಿಂಹ’ 300 ಕೋಟಿ ರೂ ಗಳಿಸಿದ ಭಾರತದ  ಮೊದಲ ಆ್ಯನಿಮೇಷನ್ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದೆ.

ಅಶ್ವಿನ್ ಕುಮಾರ್ ನಿರ್ದೇಶನ  ಮತ್ತು ಹೊಂಬಾಳೆ ಸಂಸ್ಥೆಯ ನಿರ್ಮಾಣದ ಮಹಾವತಾರ ನರಸಿಂಹ ಚಿತ್ರ ಸತತ 5ನೇ ವಾರವೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕೂಲಿ, ವಾರ್ 2, ಸು ಫ್ರಂ ಸೋ ಚಿತ್ರದ   ಪೈಪೋಟಿಯ ಹೊರತಾಗಿಯೂ  ತನ್ನ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ.

ಭಾರತದ  ಅನಿಮೇಷನ್ ಸಿನಿಮಾಗಳು  ಇಷ್ಟು ದೊಡ್ಡ ಮೊತ್ತದ ಹಣವನ್ನು ಈವರೆಗೆ ಗಳಿಕೆ ಮಾಡಿಲ್ಲ.  ವಿದೇಶದ ಅನಿಮೇಷನ್ ಸಿನಿಮಾಗಳು ಸಹ ಭಾರತದಲ್ಲಿ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿಲ್ಲ.ಕಳೆದೆರಡು ವರ್ಷಗಳಲ್ಲಿ ಬಿಡುಗಡೆ ಆದ ‘ಸ್ಪೈಡರ್​​ಮ್ಯಾನ್’, ‘ಡಾಕ್ಟರ್ ಸ್ಟ್ರೇಂಜ್’, ‘ಥಾರ್’, ‘ಅವತಾರ್’ ಸಿನಿಮಾಗಳೂ   ಇಷ್ಟು ದೊಡ್ಡ ಮೊತ್ತದ ಹಣವನ್ನು ಭಾರತದ ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿಲ್ಲ.

‘ಮಹಾವತಾರ್ ನರಸಿಂಹ’ ಸಿನಿಮಾ ಜುಲೈ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಹೊಂಬಾಳೆ ಫಿಲಮ್ಸ್​ ಬೆಂಬಲದಿಂದಾಗಿ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ದೇಶದೆಲ್ಲೆಡೆ  ಬಿಡುಗಡೆ ಆಗಿತ್ತು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!