ಅನುಶ್ರೀ ಮದುವೆ ದಿನಾಂಕ ಫಿಕ್ಸ್

ನಟಿ, ನಿರೂಪಕಿ ಅನುಶ್ರೀ ಆಗಸ್ಟ್ 28ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಆಗಸ್ಟ್ 28ರಂದು ಬೆಂಗಳೂರು ಹೊರವಲಯದ ರೆಸಾರ್ಟ್ ನಲ್ಲಿ ಬೆಳಗ್ಗೆ 10:56 ರ ಶುಭ ಮೂಹೂರ್ತದಲ್ಲಿ ಮದುವೆ ಕಾರ್ಯಕ್ರಮ ನೆರವೇರಲಿದೆ. ಕೊಡಗು ಮೂಲದ ರೋಷನ್  ಜೊತೆ ಅನುಶ್ರೀ ಮದುವೆ ಆಗಲಿದ್ದಾರೆ.

ಇತ್ತೀಚೆಗೆ ಅನುಶ್ರೀ ಹಾಗೂ ರೋಷನ್ ಒಟ್ಟಿಗೆ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಅನುಶ್ರೀ ಮದುವೆ ವಿಚಾರ ಮುನ್ನಲೆಗೆ ಬಂದಿತ್ತು. ಅನುಶ್ರೀ ಮದುವೆ ಆಗೋ ಹುಡುಗನ ಫೋಟೋ ವೈರಲ್ ಆಗಿತ್ತು.

ಕಾರ್ಯಕ್ರಮ ಒಂದರಲ್ಲಿ ಅನುಶ್ರೀ ಹಾಗೂ ರೋಷನ್ ಕಾಣಿಸಿಕೊಂಡಿದ್ದರು. ಪೂಜೆ ಮಾಡಿಸುವಾಗ ಕೆಲವರು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಎಲ್ಲ ಕಡೆಗಳಲ್ಲಿ ಇದು ವೈರಲ್ ಆಗಿತ್ತು. ಈ ಫೋಟೋ ಫ್ಯಾನ್ ಪೇಜ್​ಗಳಲ್ಲಿ ಹರಿದಾಡುತ್ತಿತ್ತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!