ಧ್ರುವ

ಧ್ರುವನಿಂದಲೇ ಟಾರ್ಚರ್ ಎಂದ ರಾಘವೇಂದ್ರ ಹೆಗಡೆ

ನಮಗೆ ಪ್ಯಾನ್ ಇಂಡಿಯಾ ಸಿನಿಮಾ‌ ಮಾಡಿ  ಎಂದು ಧ್ರುವನಿಂದಲೇ ಟಾರ್ಚರ್ ಎಂದು “ಜಗ್ಗು ದಾದ” ಸಿನಿಮಾ ನಿರ್ದೇಶಕ ರಾಘವೇಂದ್ರ ಹೆಗ್ಡೆ ಆರೋಪ ಮಾಡಿದ್ದಾರೆ.

ಧ್ರುವ ಸರ್ಜಾ ಅವರ ಮೇಲೆ 3 ಕೋಟಿ ರೂ. ವಂಚನೆ ಆರೋಪವನ್ನು ಸುಳ್ಳು ಎಂದು ಧ್ರುವ ಬಳಗ  ಹೇಳಿದೆ. ಸದ್ಯ ಈ ವಿಚಾರವಾಗಿ ನಿರ್ದೇಶಕ ರಾಘವೇಂದ್ರ ಹೆಗಡೆ ಆಕ್ರೋಶ ವ್ಯಕ್ತಪಡಿಸಿ ಸ್ಪಷ್ಟನೆ ಕೊಟ್ಟಿದ್ದಾರೆ.

ನಾನು ಕನ್ನಡದಲ್ಲೇ ಜಗ್ಗುದಾದಾ ಸಿನಿಮಾ, ಶನಿ ಸೀರಿಯಲ್, ಮಹಾಕಾಳಿ ಸೀರಿಯಲ್ ಮಾಡಿದ್ದೆ. 2ನೇ ಸಿನಿಮಾ ಧ್ರುವ ಸರ್ಜಾ ಅವರಿಗೆ ಮಾಡಬೇಕಿತ್ತು. ಕೆಡಿ ಮುಗಿಸಬೇಕು ಅಂತ ಕೇಳಿಕೊಂಡಿದ್ರು.  ಆಯ್ತು ಅಂತ 8 ವರ್ಷ ಕಾದೆ. ಒಂದು ಬಾರಿ ಅರ್ಜುನ್ ಸರ್ಜಾ ಹಾಗೂ ಧ್ರುವ ಸರ್ಜಾ ಅವರ ಸಮ್ಮುಖದಲ್ಲಿ ಕನ್ನಡ ಸಿನಿಮಾ ಮಾಡ್ತೀನಿ ಅಂತ ಹೇಳಿದ್ದೆ.  ನಮಗೆ ಪ್ಯಾನ್ ಇಂಡಿಯಾ ಸಿನಿಮಾ‌ ಮಾಡಿ ಅಂದರು. ಅದಕ್ಕೆ ನಾನು ತೆಲುಗು ಸಿನಿಮಾ ಮಾಡಿ ನಂತರ ನಿಮಗೆ ಸಿನಿಮಾ‌ ಮಾಡ್ತಿನಿ ಅಂದೆ. ಈಗಾಗಲೇ ಎಂಟು ವರ್ಷ ಅಗಿದೆ. ಮತ್ತೊಂದು ಸಿನಿಮಾ ಅಂದರೆ ಮತ್ತೆ ನಾಲ್ಕು ವರ್ಷ ಬೇಕು. ನಾನು ಕಾಯೋಕೆ ಆಗಲ್ಲ ನನ್ನ ಹಣ ವಾಪಸ್ ಕೊಡಿ‌ ಅಂತ ನೋಟಿಸ್ ಕೊಟ್ಟೆ ಎಂದಿದ್ದಾರೆ.

ನಾನು ಕನ್ನಡ ವಿರೋಧಿ ಅಂತ ಧ್ರುವ ಜೊತೆ ಇರೋರು ಹೇಳ್ತಾರೆ. ನಾನು ತಮಿಳು ಸಿನಿಮಾ ಮಾಡಬೇಕು ಅಂತಿದ್ದರೆ ತಮಿಳು ಹೀರೋ ಜೊತೆ ಮಾಡುತ್ತೇನೆ. ನಾನ್ಯಾಕೆ ಧ್ರುವ ಸರ್ಜಾ ಹಾಕೊಂಡ್ ತಮಿಳು ಸಿನಿಮಾ ಮಾಡಲಿ? ನನಗೆ ನನ್ನ ಸಹ‌ ನಿರ್ಮಾಪಕರಿಂದ ಒತ್ತಡ ಇದೆ ಅಂತ ಧ್ರುವ ಹೇಳ್ತಾರೆ. ನನಗೆ ಯಾರಿಂದಲೂ ಒತ್ತಡ ಇಲ್ಲ. ಧ್ರುವನಿಂದಲೇ ಒತ್ತಡ ಎಂದು ಹೇಳಿದ್ದಾರೆ.

ನಾನು ಕರಾವಳಿಯಲ್ಲಿ ಹುಟ್ಟಿ ಮುಂಬೈನಲ್ಲಿ ಬದುಕು ಕಟ್ಟಿಕೊಂಡವ. ನನ್ನ ತಾಯ್ನಾಡಲ್ಲಿ ಸಿನಿಮಾ ಮಾಡಬೇಕಂತ ದರ್ಶನ್ ಸರ್ ಜೊತೆ ಸಿನಿಮಾ ಮಾಡಿದ್ದೀನಿ. ಮತ್ತೆ ಸಿನಿಮಾ ಮಾಡಬೇಕು ಎಂದು ನಾನು ಧ್ರುವ ಸರ್ಜಾ ಅವ್ರಿಗೆ ಅಡ್ವಾನ್ಸ್ ಕೊಟ್ಟೆ. ಈಗ ನಾನು ತಮಿಳು ಸಿನಿಮಾ ಮಾಡಬೇಕು ಅಂತಿದ್ದೀನಿ ಅಂತ ಅರೋಪ ಮಾಡ್ತಾರೆ. ನಾನು ಕರಾವಳಿಯವನು. ನನ್ನ ಮಾತೃ ಭಾಷೆ ಕನ್ನಡ ಎಂದು ರಾಘವೇಂದ್ರ ಹೆಗಡೆ ಹೇಳಿದ್ದಾರೆ.

This Article Has 5 Comments
  1. Pingback: get androxal generic canadian

  2. Pingback: how to order enclomiphene cheap discount

  3. Pingback: how to buy xifaxan uk no prescription

  4. Pingback: cheapest buy staxyn uk order

  5. Pingback: ordering dutasteride cheap canada

Leave a Reply

Your email address will not be published. Required fields are marked *

Translate »
error: Content is protected !!