ಜಾಂಡೀಸ್ ನಿಂದ ಬಳಲುತ್ತಿದ್ದ ‘ಗಣಪ’, ‘ಕರಿಯ 2’ ಸಿನಿಮಾದ ನಟ ಸಂತೋಷ್ ಬಾಲರಾಜ್ (34 ) ಅವರು ಮಂಗಳವಾರ ವಿಧಿವಶರಾಗಿದ್ದಾರೆ.
ಜನಪ್ರಿಯ ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ ಸಂತೋಷ್ ಬಾಲರಾಜ್ ಅವರು ಜಾಂಡೀಸ್ ನಿಂದ ಕೋಮಾಗೆ ಜಾರಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಸಂತೋಷ್ ಬಾಲರಾಜ್ ಕನ್ನಡದಲ್ಲಿ ‘ಕೆಂಪ’, ‘ಗಣಪ’, ‘ಬರ್ಕ್ಲಿ’, ‘ಕರಿಯ 2’ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಗಣಪ’ ಹಾಗೂ ‘ಕರಿಯ 2’ ಸಿನಿಮಾಗಳು ಸಂತೋಷ್ ಬಾಲರಾಜ್ಗೆ ಸಣ್ಣ ಮಟ್ಟದ ಯಶಸ್ಸನ್ನು ನೀಡಿದ್ದವು.
ತಮ್ಮದೇ ಬ್ಯಾನರ್ನ ಸಿನಿಮಾಗಳಲ್ಲಿ ಸಂತೋಷ್ ಬಾಲರಾಜ್ ನಟಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಸಂತೋಷ್ ಬಾಲರಾಜ್ ಅವರ ತಂದೆ ನಿರ್ಮಾಪಕ ಆನೇಕಲ್ ಬಾಲರಾಜ್ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆ ಬಳಿಕ ಸಂತೋಷ್ ಬಾಲರಾಜ್ ಸಿನಿಮಾಗಳಿಂದ ದೂರ ಉಳಿದಿದ್ದರು. ಆದರೆ ಗ್ರ್ಯಾಂಡ್ ಕಮ್ ಬ್ಯಾಕ್ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದರು.
ಸಂತೋಷ್ ಬಾಲರಾಜ್ ಇವರ ತಂದೆ ಆನೇಕಲ್ ಬಾಲರಾಜ್ ‘ಕರಿಯ’ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ್ದ ಈ ಸಿನಿಮಾವನ್ನು ಜೋಗಿ ಪ್ರೇಮ್ ನಿರ್ದೇಶಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಕನ್ನಡದಲ್ಲಿ ಒಂದಷ್ಟು ಸಿನಿಮಾಗಳನ್ನು ನಿರ್ಮಿಸಿದ ಬಳಿಕ ತಮ್ಮ ಮಗ ಸಂತೋಷ್ ಬಾಲರಾಜ್ ಅವರನ್ನು ಆನೇಕಲ್ ಬಾಲರಾಜ್ ಚಿತ್ರರಂಗಕ್ಕೆ ಪರಿಚಯಿಸಿದ್ದರು.
—-





Pingback: cheap enclomiphene australia price