ವೀರ ಮಲ್ಲು

Movie Review: ಕೊಹಿನೂರು ವಜ್ರದ ಕಥೆ ಹರಿಹರ ವೀರ ಮಲ್ಲು

ಚಿತ್ರ: ಹರಿಹರ ವೀರ ಮಲ್ಲು
ನಿರ್ದೇಶನ: ಕ್ರಿಶ್ ಮತ್ತು ಜ್ಯೋತಿ ಕೃಷ್ಣ
ತಾರಾ ಬಳಗ: ಪವನ್ ಕಲ್ಯಾಣ್, ನಿಧಿ ಅಗರ್ವಾಲ್, ಸನ್ನಿ ಡಿಯೋಲ್, ಸತ್ಯ ರಾಜ್ ಮುಂತಾದವರು
ರೇಟಿಂಗ್: 3

ಔರಂಗಜೇಬನ ಕಾಲದಲ್ಲಿ ಕೊಹಿನೂರು ವಜ್ರವನ್ನು ಗೋಲ್ಕಂಡದ ದೊರೆಗೆ ತಲುಪಿಸಲು ಯತ್ನಿಸುವ ಕಥಾ ಹಂದರ ಹೊಂದಿರುವ ಚಿತ್ರ ಹರಿಹರ ವೀರ ಮಲ್ಲು.

ಚಿತ್ರದಲ್ಲಿ ವೀರಮಲ್ಲು ಪಾತ್ರದಲ್ಲಿ ಪವನ್ ಕಲ್ಯಾಣ್ ಕಾಣಿಸಿಕೊಂಡಿದ್ದಾರೆ. ವಜ್ರಗಳನ್ನು ಕದಿಯುವುದು ಕಾಯಕ ಮಾಡಿಕೊಂಡ ವೀರಮಲ್ಲು , ಗೋಲ್ಕೊಂಡದ ದೊರೆ ಕುತುಬ್ ಶಾಗೆ ಕೊಹಿನೂರು ವಜ್ರ ತಂದು ಕೊಡುವ ಕೆಲಸವನ್ನು ಯಾಕೆ ಮಾಡುತ್ತಾನೆ? ಈ ಕೆಲಸದಲ್ಲಿ ಯಶಸ್ವಿ ಆಗುತ್ತಾನೆಯೇ ಎಂಬುದನ್ನು ನೋಡಲು ಚಿತ್ರವನ್ನು ನೋಡಬೇಕಿದೆ.

ಸಿನಿಮಾ ನೈಜ ಕಥೆ ಹೊಂದಿಲ್ಲ. ಇದು ಕಾಲ್ಪನಿಕ ಕಥೆಯನ್ನು ಆಧರಿಸಿದೆ. ಇತಿಹಾಸದ ಪಾತ್ರಗಳ ಜೊತೆಗೆ ಸಮೀಕರಣ ಮಾಡಿ ಸಿನಿಮಾ ಮಾಡುವ ಯತ್ನವನ್ನು ಇಲ್ಲಿ ಮಾಡಲಾಗಿದೆ.

ಕಥೆಯನ್ನು ಆಯ್ಕೆ ಮಾಡಿಕೊಂಡ ಬಗೆ ಚೆನ್ನಾಗಿದ್ದರೂ ಚಿತ್ರಕಥೆ ಮಾಡಿ ಸಿನಿಮಾ ರೂಪಕ್ಕೆ ಇಳಿಸುವಲ್ಲಿ ಚಿತ್ರತಂಡ ಸ್ವಲ್ಪ ಎಡವಿದೆ. ಐತಿಹಾಸಿಕ ಹೋರಾಟಗಾರನ ಪಾತ್ರದಲ್ಲಿ ಪವನ್ ಕಲ್ಯಾಣ್ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಔರಂಗಜೇಬ್ ಪಾತ್ರದಲ್ಲಿ ಸನ್ನಿ ಡಿಯೋಲ್ ಗಮನ ಸೆಳೆಯುತ್ತಾರೆ.

ಪಂಚಮಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಿಧಿ ಅಗರವಾಲ್ ಗೆ ಸಿನಿಮಾದಲ್ಲಿ ಅಂತ ಮಹತ್ವ ಇಲ್ಲ. ಸಚಿನ್ ಕಡೆಕರ್, ಸತ್ಯ ರಾಜ್ ತಮ್ಮ ಪಾತ್ರಗಳನ್ನು ಸೊಗಸಾಗಿ ನಿಭಾಯಿಸಿದ್ದಾರೆ.

ಕೀರವಾಣಿ ಸಂಗೀತ ಚಿತ್ರದ ಹೈಲೈಟ್ ಆಗಿದೆ. ಸಾಯಿ ಮಾಧವ ಬುರ್ರಾ ಅವರ ಸಂಭಾಷಣೆ ಗಮನ ಸೆಳೆಯುತ್ತದೆ. ಜ್ಞಾನ ಶೇಖರ್ ಹಾಗೂ ಮನೋಜ್ ಪರಮಹಂಸ ಛಾಯಾಗ್ರಹಣ ಚೆನ್ನಾಗಿದೆ.

ಚಿತ್ರದಲ್ಲಿ ವಿ ಎಫ್ ಎಕ್ಸ್ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿಲ್ಲ. ಇದರಿಂದ ಚಿತ್ರ ಉತ್ತಮವಾಗಿ ಹೊರಬರುವಲ್ಲಿ ಹಿನ್ನಡೆಯಾಗಿದೆ.

ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಚಿತ್ರ ಇಷ್ಟವಾಗುತ್ತದೆ. ಆದರೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡು ಹೋದರೆ ಚಿತ್ರ ನಿರಾಸೆ ಮೂಡಿಸಬಹುದು.

This Article Has 7 Comments
  1. Pingback: online order androxal australia discount

  2. Pingback: Buy enclomiphene no script

  3. Pingback: buy xifaxan generic dosage

  4. Pingback: purchase staxyn new zealand buy online

  5. Pingback: get dutasteride uk how to get

  6. Pingback: fildena chicago where to buy

  7. Pingback: jak získat skutečný kamagra

Leave a Reply

Your email address will not be published. Required fields are marked *

Translate »
error: Content is protected !!