ಕೊಲೆ ಆರೋಪಿ ದರ್ಶನ್ ಮತ್ತೊಬ್ಬ ಕೊಲೆ ಆರೋಪಿ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ!
ಡೆವಿಲ್ ಸಿನಿಮಾದ ಸಾಂಗ್ ಶೂಟಿಂಗ್ಗಾಗಿ ಥೈಲ್ಯಾಂಡ್ನಲ್ಲಿ ಬೀಡುಬಿಟ್ಟ ದರ್ಶನ್, ಮಂಗಳೂರು ಮೂಲದ ಥೈಲ್ಯಾಂಡ್ ನ ಉದ್ಯಮಿ ಬಿಪಿನ್ ರೈ ಜೊತೆ ಕಾಣಿಸಿಕೊಂಡಿದ್ದಾರೆ. ಬಿಪಿನ್ ರೈ ಜೊತೆ ದರ್ಶನ್ ಸಖತ್ ಪಾರ್ಟಿ ನಡೆಸಿದ್ದಾರೆ. ಸದ್ಯ ಈ ಫೋಟೋಗಳು ವೈರಲ್ ಆಗಿವೆ.
ಅಕ್ಟೋಬರ್ 7, 2024 ರಂದು ಮಂಗಳೂರಿನಲ್ಲಿ ಕೊಲೆ ನಡೆದಿತ್ತು. ಈ ಕೊಲೆಗೆ ಸುಪಾರಿ ನೀಡಿದ್ದು ಬಿಪಿನ್ ರೈ ಎಂಬ ಆರೋಪ ಕೇಳಿ ಬಂದಿತ್ತು. ಆಗ ಮಂಗಳೂರಿನ ಪಂಪ್ವೆಲ್ ನಲ್ಲಿ ‘ಯಶೋಧಾ ಕೃಷ್ಣ’ ಸಂಸ್ಥೆ ಹೆಸರಲ್ಲಿ ಬಿಪಿನ್ ಫೈನಾನ್ಸ್ ನಡೆಸುತ್ತಿದ್ದ. ಬಿಪಿನ್ ನಿಂದ ಫೈನಾನ್ಸ್ ನಲ್ಲಿ ಅಬ್ದುಲ್ ಹಮೀದ್ ಹಣ ಪಡೆದಿದ್ದ. ಹಣ ನೀಡದೇ ಸತಾಯಿಸಿದ್ದಕ್ಕೆ ಬಿಪಿನ್ ರೈ ಸುಪಾರಿ ನೀಡಿ ಹರೀಶ್ ಮತ್ತು ಅಭಿಶೇಕ್ ಹಮೀದ್ ನ ಕೊಲೆ ಮಾಡಿದ್ದರು.
ವಿಚಾರಣೆ ವೇಳೆ ಬಿಪಿನ್ ನ ಸುಪಾರಿ ನೀಡಿ ಕೊಲೆ ಮಾಡಿರೋದಾಗಿ ಹಂತಕರು ಹೇಳಿದ್ದರು. ಎಫ್ ಐಆರ್ ದಾಖಲಾಗುತ್ತಿದ್ದಂತೆ ವಿದೇಶಕ್ಕೆ ಬಿಪಿನ್ ಎಸ್ಕೇಪ್ ಆಗಿದ್ದ. ಮಂಗಳೂರು ಗ್ರಾಮಾಂತರ ಪೊಲೀಸರಿಂದ ಲುಕ್ ಔಟ್ ನೊಟೀಸ್ ಜಾರಿ ಆಗಿತ್ತು. 2015 ಜೂನ್ 29 ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಿಪಿನ್ ಆಗಮಿಸಿದ್ದ ವೇಳೆ ವಿಮಾನ ನಿಲ್ದಾಣದಲ್ಲಿ ಬಿಪಿನ್ ರೈ ಬಂಧನಕ್ಕೆ ಒಳಗಾಗಿದ್ದ. ಈ ಪ್ರಕರಣ ಸಂಬಂಧ ಜೈಲು ಶಿಕ್ಷೆ ಅನುಭವಿಸಿದ್ದ ಬಿಪಿನ್ ರೈ ಬಳಿಕ ಥೈಲ್ಯಾಂಡ್ ನಲ್ಲಿ ಉದ್ಯಮ ನಡೆಸುತ್ತಿದ್ದ ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಏಳು ಮಂದಿಗೆ ಹೈಕೋರ್ಟ್ ಕೊಟ್ಟಿರುವ ಜಮೀನಿನ ಬಗ್ಗೆ ಸುಪ್ರೀಂಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಸುಪ್ರೀಂಕೋರ್ಟ್ನಲ್ಲಿ 10 ದಿನಗಳ ಬಳಿಕ ಜಾಮೀನು ತೀರ್ಪು ಬರಲಿದೆ.






Be the first to comment