ಜೂನ್.8 ಕ್ಕೆ ‘ಐಲವ್​ಯೂ’ಆಡಿಯೋ

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್​.ಚಂದ್ರು ಕಾಂಬಿನೇಷನ್ ಬಹುನಿರೀಕ್ಷಿತ ‘ಐಲವ್​ಯೂ’ ಸಿನಿಮಾ ಟ್ರೈಲರ್ ಹಾಗೂ ಹಾಡುಗಳಿಂದಲೇ ಸಿಕ್ಕಾಪಟ್ಟೇ ಸೌಂಡ್​ ಮಾಡಿತ್ತು. ಚಿತ್ರ ರಿಲೀಸ್​ಗೆ ಕೆಲ ದಿನಗಳು ಬಾಕಿ ಇರುವಂತೆ ಇದೀಗ ಚಿತ್ರತಂಡ ತೆಲುಗಿನಲ್ಲಿ ಆಡಿಯೋ ರಿಲೀಸ್​​ ಮಾಡೋಕೆ ಸಿದ್ದತೆ ನಡೆಸಿದೆ. ಅಂದುಕೊಂಡಂತೆ ಭಾರೀ ಗ್ರ್ಯಾಂಡ್‌ ಆಗಿ ಜೂನ್.8 ಕ್ಕೆ ವಿಶಾಖಪಟ್ಟಣದಲ್ಲಿ ಆಡಿಯೋ ಸಮಾರಂಭ ನಡೆಯಲಿದ್ದು ಅತಿಥಿಯಾಗಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಬರಲಿದ್ದಾರೆ ಅನ್ನೋದೆ ವಿಶೇಷ.

ಹೀಗಾಗಿ ಮಹೇಶ್‌ಬಾಬು ಹಾಗೂ ರಿಯಲ್ ಸ್ಟಾರ್ ಉಪ್ಪಿನ ಒಂದೇ ವೇದಿಕೆಯಲ್ಲಿ ನೋಡೋ ಅವಕಾಶ ಅಭಿಮಾನಿಗಳಿಗೆ ಒದಗಿ ಬರಲಿದೆ. ಹಾಗೆ ನೋಡಿದ್ರೆ ಮೊದಲಿನಿಂದಲೂ ಉಪ್ಪಿಗೆ ಟಾಲಿವುಡ್ ಜೊತೆ ಉತ್ತಮ ನಂಟಿದೆ. ಕನ್ನಡದ ಜೊತೆ ಜೊತೆಗೆ ತೆಲುಗು ಇಂಡಸ್ಟ್ರಿಯಲ್ಲಿ ಬೆಳದವರು ಉಪ್ಪಿಯ. ಅವರ ಎ, ಉಪೇಂದ್ರ, ಓಂ ಅಂತಹ ಚಿತ್ರಗಳು ತೆಲುಗಿನಲ್ಲಿ ಡಬ್ ಆಗಿವೆ, ರೀಮೇಕ್ ಆಗಿವೆ. ಹಾಗೇ ಮಹೇಶ್‌ಬಾಬು ಜೊತೆ ಒಳ್ಳೇ ಒಡನಾಟವಿದ್ದು ಆಡಿಯೋ ಫಂಕ್ಷನ್‌ಗೆ ಆಹ್ವಾನವಿಟ್ಟಿದ್ದಾರೆ. ಹಿಂದೆ ಪ್ರಿನ್ಸ್ ಮಹೇಶ್ ಬಾಬು ಅವರ ಹೊಸ ಸಿನಿಮಾದಲ್ಲಿ ಉಪೇಂದ್ರ ಅವರಿಗಾಗಿ ಒಂದು ಪಾತ್ರ ಮೀಸಲಿಟ್ಟು ಕೇಳಿದ್ರಂತೆ.ಆದ್ರೆ ಆಗ ಉಪ್ಪಿ ಒಪ್ಪಿಕೊಳ್ಳಲಿಲ್ವಂತೆ. ರಚಿತಾ ರಾಮ್, ಸೋನುಗೌಡ, ಉಪ್ಪಿ ಕಾಂಬಿನೇಷನ್ ಸಿನಿಮಾ ಕನ್ನಡ ಹಾಗೂ ತೆಲುಗಿನಲ್ಲಿ ಜೂನ್ 14ರಂದು ತೆರೆಕಾಣಲಿದೆ.

This Article Has 2 Comments
  1. Pingback: Buy Sex Toys Online

  2. Pingback: dumps website

Leave a Reply

Your email address will not be published. Required fields are marked *

Translate »
error: Content is protected !!